‘ದರ್ಶನ್​ ಒಳ್ಳೆ ವ್ಯಕ್ತಿ, ಜೊತೆಗಾರರಿಂದ ಏನೋ ಮೋಸ ನಡೆದಿದೆ’: ನಿರ್ಮಾಪಕ ಶ್ರೀನಿವಾಸ್​

Updated on: Jun 21, 2024 | 7:05 PM

‘90 ದಿನ ಆದ್ಮೇಲೆ ದರ್ಶನ್​ ಬರುತ್ತಾರೆ. ಶೂಟಿಂಗ್​ಗೆ ಹೋಗುತ್ತಾರೆ. ನೀವೆಲ್ಲ ಅದನ್ನು ನೋಡಿತ್ತೀರಿ. ನಾವೆಲ್ಲ ಸಿನಿಮಾ ಮಾಡುತ್ತೇವೆ. ಅವರ ಡೇಟ್​ ನಮ್ಮ ಬಳಿ ಇದೆ. ಅವರನ್ನು ಮೇಲಕ್ಕೆ ಎತ್ತಬೇಕು ಎಂಬುದೇ ನಮ್ಮ ಆಸೆ’ ಎಂದು ಖ್ಯಾತ ನಿರ್ಮಾಪಕ ಶ್ರೀನಿವಾಸ್​ ಹೇಳಿದ್ದಾರೆ. ದರ್ಶನ್​ ಜೊತೆಗಿನ ತಮ್ಮ ಒಡನಾಟದ ಬಗ್ಗೆ ಅವರು ಮಾತನಾಡಿದ್ದಾರೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ನಟ ದರ್ಶನ್​ (Darshan) ಸಂಕಷ್ಟ ಎದುರಿಸುತ್ತಿದ್ದಾರೆ. ಸದ್ಯ ಪೊಲೀಸ್​ ಕಸ್ಟಡಿಯಲ್ಲಿ ಇರುವ ಅವರ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಮಾತನಾಡಿದ್ದಾರೆ. ದರ್ಶನ್​ ವ್ಯಕ್ತಿತ್ವದ ಬಗ್ಗೆ ನಿರ್ಮಾಪಕ ಶ್ರೀನಿವಾಸ್​ (Producer Srinivas) ಈಗ ಅನಿಸಿಕೆ ತಿಳಿಸಿದ್ದಾರೆ. ‘ದರ್ಶನ್​ ಜೊತೆ ನಾನು 20 ವರ್ಷದಿಂದ ಜರ್ನಿ ಮಾಡುತ್ತಾ ಇದ್ದೇನೆ. ಅವರು ತುಂಬ ಒಳ್ಳೆಯ ವ್ಯಕ್ತಿ. ಸಹವಾಸದಿಂದ ಸನ್ಯಾಸಿ ಕೆಟ್ಟ ಅಂತ ನಮ್ಮ ಹಳ್ಳಿಯಲ್ಲಿ ಹೇಳುತ್ತಾರೆ. ಆ ರೀತಿ, ಸುತ್ತಲೂ ಇರುವ ಜನರಿಂದ ದರ್ಶನ್ ಕೆಟ್ಟಿದ್ದಾರೆ. ಅವರ ಹೃದಯ ತುಂಬ ಒಳ್ಳೆಯದು. ಎಷ್ಟೋ ಸಲ ನಾನು ಅವರ ತೋಟಕ್ಕೆ ಹೋಗಿ ಊಟ ಮಾಡಿದ್ದೇನೆ. ಅವರ ಮನೆಗೆ ಹೋಗಿದ್ದೇನೆ. ಅಂಥವರು ಈ ರೀತಿ ಮಾಡಿದ್ದಾರೆ ಎಂದರೆ ಜೊತೆಯಲ್ಲಿ ಇರುವವರಿಂದ ಏನೋ ಮೋಸ ನಡೆದಿದೆ ಅಂತ ನನಗೆ ಅನಿಸುತ್ತದೆ. ದರ್ಶನ್​ ತುಂಬ ಒಳ್ಳೆಯವರು. ಅವರು ಹೊರಗೆ ಬಂದೇ ಬರುತ್ತಾರೆ. ಸಹವಾಸದಿಂದ ಈ ರೀತಿ ಆಗಿದೆ. ನಿರ್ಮಾಪಕರು 150 ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ. ಅವರಿಗೆಲ್ಲ ಅನ್ಯಾಯ ಆಗಬಾರದು. ಕಾನೂನಿನ ಪ್ರಕಾರ ದರ್ಶನ್​ ಅವರನ್ನು ಶೂಟಿಂಗ್​ಗೆ ಕಳಿಸುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದಿದ್ದಾರೆ ನಿರ್ಮಾಪಕ ಶ್ರೀನಿವಾಸ್​. ಪ್ರಕರಣದ ಎ1 ಆರೋಪಿಯಾದ ಪವಿತ್ರಾ ಗೌಡ (Pavithra Gowda) ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More