Loading video

ರಾಯಚೂರಿನಲ್ಲಿ ರೈಲಿನ ಕೆಳಗೆ ಸಿಲುಕಿದ್ದ ಹಸು ರಕ್ಷಣೆ: ಕೆಲವೇ ಕ್ಷಣಗಳಲ್ಲಿ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 11, 2024 | 7:37 PM

ರೈಲಿನಡಿ ಸಿಲುಕಿ ಗಾಯಗೊಂಡು ನರಳಾಡಿದ್ದ ಹಸು ರಕ್ಷಣೆಗೊಳಗಾದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿರುವಂತಹ ಘಟನೆ ರಾಯಚೂರು ರೈಲು ನಿಲ್ದಾಣದಲ್ಲಿ ನಡೆದಿದೆ. ಮುಂಬೈ-ಚೆನ್ನೈ ಎಕ್ಸ್‌ಪ್ರೆಸ್‌ ರೈಲಿನಡಿ ಹಸು ಸಿಲುಕಿದ್ದರಿಂದ 1 ಗಂಟೆಯಿಂದ ರಾಯಚೂರಿನಲ್ಲೇ ರೈಲು ನಿಂತುಕೊಂಡಿತ್ತು. ಮಾಹಿತಿ ತಿಳಿದು ರೈಲ್ವೆ ಪೊಲೀಸರು ಸ್ಥಳಕ್ಕಾಗಮಿಸಿದ್ದರು.

ರಾಯಚೂರು, ಆಗಸ್ಟ್​​ 11: ರೈಲಿನ ಕೆಳಗೆ ಹಸು (cow) ಸಿಲುಕಿ ನರಳಾಡಿರುವಂತಹ ಘಟನೆ ರಾಯಚೂರು ರೈಲ್ವೆ ‌ನಿಲ್ದಾಣದಲ್ಲಿ ನಡೆದಿದೆ. ರೈಲ್ವೆ ಸಿಬ್ಬಂದಿ, ರೈಲ್ವೆ (train) ಪೊಲೀಸರು ಹಾಗೂ ಸ್ಥಳೀಯರಿಂದ ಹಸು ರಕ್ಷಣೆ ಮಾಡಲಾಗಿದೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಹಿನ್ನೆಲೆ ರಕ್ಷಣೆಗೊಳಗಾದ ಕೆಲವೇ ಕ್ಷಣಗಳಲ್ಲಿ ಹಸು ಮೃತಪಟ್ಟಿದೆ. ಘಟನೆಯಿಂದಾಗಿ ಮುಂಬೈ- ಚೆನ್ನೈ ಎಕ್ಸ್‌ಪ್ರೆಸ್‌ ಮಾರ್ಗದ ರೈಲು ಕಳೆದ ಒಂದು ಗಂಟೆಯಿಂದ ರಾಯಚೂರು ರೈಲ್ವೆ ‌ನಿಲ್ದಾಣದಲ್ಲಿಯೇ ನಿಂತಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ರೈಲ್ವೆ ಪೊಲೀಸರು ಆಗಮಿಸಿದ್ದರು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Aug 11, 2024 07:37 PM