ಸುಳ್ಯದ ಗ್ರಾಮವೊಂದರಲ್ಲಿ ನದಿಯಿಂದ ಹೊರಬಂದ ಮೊಸಳೆ ಸ್ಥಳೀಯರ ಮೊಬೈಲ್ ಕೆಮೆರಾಗಳಲ್ಲಿ ಸೆರೆಯಾಯಿತು
ಮೊಸಳೆ ನದಿಯ ಕಡೆ ಹೋಗುತ್ತಿರುವಾಗ ಒಂದು ನಾಯಿ ಅದರ ಸಮೀಪಕ್ಕೆ ಬಂದು ಬೊಗಳಲಾರಂಭಿಸಿದ ಕಾರಣ ಅದರ ಮೂವ್ಮೆಂಟ್ ತಾತ್ಕಾಲಿಕವಾಗಿ ನಿಂತುಬಿಡುತ್ತದೆ.
ಸುಳ್ಯ: ಮೊಸಳೆಗಳು (crocodiles) ನೀರಿನಿಂದ ಹೊರಬಂದು ನೆಲದ ಮೇಲೆ ಓಡಾಡುವ ಪ್ರಸಂಗಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ ಮಾರಾಯ್ರೇ. ಸುಳ್ಯ (Sullia) ತಾಲ್ಲೂಕಿನ ಯೆನೆಕಲ್ಲು (Yenekal) ಗ್ರಾಮದಲ್ಲಿ ಬಚ್ಚನಾಯಕನ ದೇವಸ್ಥಾನ ಮುಂಭಾಗದಲ್ಲಿ ಹರಿಯುವ ನದಿಯಿಂದ ಹೊರಬಂದಿರುವ ಮೊಸಳೆ ಸ್ಥಳೀಯರ ಕೆಮೆರಾಗಳಲ್ಲಿ ಸೆರೆಯಾಗಿದೆ. ಅದು ನದಿಯ ಕಡೆ ಹೋಗುತ್ತಿರುವಾಗ ಒಂದು ನಾಯಿ ಅದರ ಸಮೀಪಕ್ಕೆ ಬಂದು ಬೊಗಳಲಾರಂಭಿಸಿದ ಕಾರಣ ಅದರ ಮೂವ್ಮೆಂಟ್ ತಾತ್ಕಾಲಿಕವಾಗಿ ನಿಂತುಬಿಡುತ್ತದೆ.