ಹೆಚ್ ಡಿ ರೇವಣ್ಣರನ್ನು ಭೇಟಿಯಾಗಲು ಬಂದ ವಕೀಲರು ಸಂದರ್ಶನ ಪುಸ್ತಕದಲ್ಲಿ ಸಹಿ ಹಾಕಿ ವಾಪಸ್ಸು ಹೋದರು
ನಾವು ಅಗಲೇ ವರದಿ ಮಾಡಿರುವಂತೆ, ಹೆಚ್ ಡಿ ರೇವಣ್ಣರನ್ನು ಶನಿವಾರ ಸಾಯಂಕಾಲ ಪದ್ಮನಾಭನಗರದಲ್ಲಿರುವ ಹೆಚ್ ಡಿ ದೇವೇಗೌಡರ ಮನೆಯಿಂದ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದರು ಮತ್ತು ನ್ಯಾಯಾಲಯ ಅವರನ್ನು 4 ದಿನಗಳ ಕಾಲ ಎಸ್ಐಟಿ ವಶಕ್ಕೆ ಒಪ್ಪಿಸಿದೆ.
ಬೆಂಗಳೂರು: ಮಹಿಳೆಯೊಬ್ಬರ ಅಪಹರರಣ (woman kidnaping case) ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಹಿರಿಯ ಜೆಡಿಎಸ್ ನಾಯಕ ಮತ್ತು ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರನ್ನು ಭೇಟಿಯಾಗಲು ಅವರು ವಕೀಲರಿಗೆ ನ್ಯಾಯಾಧೀಶರು ಅನುಮತಿ ನೀಡಿರುವುದರಿಂದ ಹಿರಿಯ ವಕೀಲರೊಬ್ಬರು ತಮ್ಮ ಜ್ಯೂನಿಯರ್ ನೊಂದಿಗೆ ಎಸ್ಐಟಿ ಕಚೇರಿಯಿರುವ ಸಿಐಡಿ ಕಚೇರಿಗೆ (CID office) ಆಗಮಿಸಿದರು. ವಕೀಲರು ಕಾರ್ಲಟನ್ ಕಟ್ಟಡದ ಆವರಣಗೊಳಗೆ ಬಂದು ಸಂದರ್ಶಕರ ಪುಸ್ತಕದಲ್ಲಿ ಸಹಿ ಮಾಡುತ್ತಾರಾದರೂ ವಾಪಸ್ಸು ಹೋಗುತ್ತಾರೆ. ಅವರು ಸಮಯ ಕೇಳಲು ಬಂದಿದ್ದರೋ ಅಥವಅ ಅವರಿಗೆ ಸಮಯ ನೀಡಲಾಯಿತೋ ಗೊತ್ತಾಗಲಿಲ್ಲ. ಪುಸ್ತಕದಲ್ಲಿ ಸಹಿ ಮಾಡಿದ ಬಳಿಕ ವಕೀಲರು ಬೈಕ್ ಹತ್ತಿ ವಾಪಸ್ಸು ಹೋಗುವುದನ್ನು ದೃಶ್ಯಗಳಲ್ಲಿ ನೋಡಬಹುದು. ನಾವು ಅಗಲೇ ವರದಿ ಮಾಡಿರುವಂತೆ, ಹೆಚ್ ಡಿ ರೇವಣ್ಣರನ್ನು ಶನಿವಾರ ಸಾಯಂಕಾಲ ಪದ್ಮನಾಭನಗರದಲ್ಲಿರುವ ಹೆಚ್ ಡಿ ದೇವೇಗೌಡರ ಮನೆಯಿಂದ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದರು ಮತ್ತು ನ್ಯಾಯಾಲಯ ಅವರನ್ನು 4 ದಿನಗಳ ಕಾಲ ಎಸ್ಐಟಿ ವಶಕ್ಕೆ ಒಪ್ಪಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೆಚ್ ಡಿ ರೇವಣ್ಣ ಹೊಳೆನರಸೀಪುರ ಮನೆ ಬಾಗಿಲಿಗೆ ಪೊಲೀಸರು, ಹೆಚ್ಚಿದ ಭವಾನಿ ರೇವಣ್ಣ ಆತಂಕ