ಪುಂಡರ ವ್ಹೀಲಿಂಗ್ ಸ್ಟಂಟ್​ಗಳಿಂದ ಬೇರೆಯವರ ಜೀವಕ್ಕೆ ಅಪಾಯವಿದೆ, ಅದು ಪೊಲೀಸರಿಗೆ ಗೊತ್ತಾಗುತ್ತಿಲ್ಲ!

ಪುಂಡರ ವ್ಹೀಲಿಂಗ್ ಸ್ಟಂಟ್​ಗಳಿಂದ ಬೇರೆಯವರ ಜೀವಕ್ಕೆ ಅಪಾಯವಿದೆ, ಅದು ಪೊಲೀಸರಿಗೆ ಗೊತ್ತಾಗುತ್ತಿಲ್ಲ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 07, 2022 | 6:30 PM

ಪೊಲೀಸರ ಎದುರುಗಡೆಯೇ ಅವರು ಈ ಕಾನೂನುಬಾಹಿರ ಕೃತ್ಯವೆಸಗುತ್ತಿದ್ದಾರೆ. ಈ ವಿಡಿಯೋನಲ್ಲಿ ಇಬ್ಬರು ಕಾನ್ಸ್ಟೇಬಲ್ ಗಳು ನಡೆದು ಹೋಗುತ್ತಿರುವುದು ನಿಮಗೆ ಕಾಣುತ್ತದೆ. ಆದರೆ, ಅವರ ಧೋರಣೆ ನೋಡಿ, ತಮಗೂ ಪುಂಡರ ಆಟಕ್ಕೂ ಸಂಬಂಧವೇ ಇಲ್ಲ ಅನ್ನೋ ಹಾಗೆ ಹೋಗುತ್ತಿದ್ದಾರೆ.

ಬೆಂಗಳೂರು: ಈ ವಿಡಿಯೋ ನೋಡಿ ಮಾರಾಯ್ರೇ. ಬೆಂಗಳೂರಿನ ಪ್ರಮುಖ ಏರಿಯಾಗಳಲ್ಲಿ ಒಂದಾಗಿರುವ ಆರ್ ಟಿ ನಗರದ (RT Nagar) ಸರ್ಕಾರೀ ಶಾಲೆಯೊಂದರ ಮುಂದಿನ ರಸ್ತೆಯಲ್ಲಿ ಪ್ರತಿನಿತ್ಯ ಕಂಡುಬರುವ ದೃಶ್ಯವಿದು. ಈ ರಸ್ತೆ ನಿರ್ದಿಷ್ಟವಾಗಿ ಪುಂಡರು ವ್ಹೀಲಿಂಗ್ (wheeling) ಮಾಡುವುದಕ್ಕಾಗೇ ಮೀಸಲಿಟ್ಟಿರಬಹುದು ಅಂತ ಅನಿಸುತ್ತದೆ. ನಿರ್ಭೀತಿಯಿಂದ ವ್ಹೀಲಿಂಗ್ ಮಾಡುತ್ತಿರುವ ದುಷ್ಟರಿಗೆ (rogues) ತಮ್ಮ ಸ್ವಾಸ್ಥ್ಯದ ಬಗ್ಗೆಯಂತೂ ಚಿಂತೆಯಿಲ್ಲ ಅದರೆ ರಸ್ತೆಯಲ್ಲಿ ಸಂಚರಿಸುವ ಬೇರೆಯವರ ಪ್ರಾಣಕ್ಕೂ ಅಪಾಯ ಒಡ್ಡುತ್ತಿದ್ದಾರೆ. ಇವರಿಗೆ ಯಾರ ಭಯವೂ ಇಲ್ಲ ನಾವು ಹೇಳುತ್ತಿರುವುದಕ್ಕೆ ಕಾರಣವಿದೆ. ಏನು ಗೊತ್ತಾ? ಪೊಲೀಸರ ಎದುರುಗಡೆಯೇ ಅವರು ಈ ಕಾನೂನುಬಾಹಿರ ಕೃತ್ಯವೆಸಗುತ್ತಿದ್ದಾರೆ. ಈ ವಿಡಿಯೋನಲ್ಲಿ ಇಬ್ಬರು ಕಾನ್ಸ್ಟೇಬಲ್ ಗಳು ನಡೆದು ಹೋಗುತ್ತಿರುವುದು ನಿಮಗೆ ಕಾಣುತ್ತದೆ. ಆದರೆ, ಅವರ ಧೋರಣೆ ನೋಡಿ, ತಮಗೂ ಪುಂಡರ ಆಟಕ್ಕೂ ಸಂಬಂಧವೇ ಇಲ್ಲ ಅನ್ನೋ ಹಾಗೆ ಹೋಗುತ್ತಿದ್ದಾರೆ.

ಪುಂಡ ಯುವಕರಿಗೆ ಮನೆಗಳಳಲ್ಲೂ ಹೇಳೋರು ಕೇಳೋರು ಯಾರೂ ಇಲ್ಲ ಅನಿಸುತ್ತೆ ಮಾರಾಯ್ರೇ. ನಗರದ ಅನೇಕ ಭಾಗಗಳಲ್ಲಿ ಯುವಕರು ಡ್ರಗ್ಸ್ ನಂಥ ಭಯಂಕರ ಚಟಕ್ಕೆ ಬೀಳುತ್ತಿದ್ದಾರೆ. ಶಾಲೆ ಮತ್ತು ಕಾಲೇಜುಗಳ ಸುತ್ತಮುತ್ತ ಡ್ರಗ್ ಪೆಡ್ಲರ್ ಗಳು ರಣಹದ್ದುಗಳಂತೆ ಯುವಕರಿಗಾಗಿ ಕಾಯುತ್ತಿರುತ್ತಾರೆ. ಅಲ್ಲೂ ಅವರಿಗೆ ಪೊಲೀಸರ ಭಯವಿಲ್ಲ.

ಇದನ್ನು ನಾವು ಯಾಕೆ ಹೇಳುತ್ತಿದ್ದೇವೆ ಅಂದರೆ, ಮಕ್ಕಳು ಕಾಲೇಜಿಗೆ ಹೋದ ಬಳಿಕ ಅವರು ಏನು ಮಾಡುತ್ತಾರೆ, ಅವರ ಫ್ರೆಂಡ್ಸ್ ಸರ್ಕಲ್ ಎಂಥದ್ದು, ಕಾಲೇಜು ಮುಗಿದ ಬಳಿಕ ನೆಟ್ಟಗೆ ಮನೆಗೆ ಬರುತ್ತಾರಾ ಮೊದಲಾದ ಸಂಗತಿಗಳನ್ನು ಪಾಲಕರು ಗಮನಿಸಬೇಕಾಗುತ್ತದೆ.

ವ್ಹೀಲಿಂಗ್ ಮಾಡುತ್ತಿರುವ ದುಷ್ಟರ ತಂದೆ ತಾಯಿಗಳಿಗೆ ಇದ್ಯಾವುದರ ಪರಿವೆ ಇಲ್ಲ. ಅಥವಾ ಬೇರೆಯವರ ಪ್ರಾಣಕ್ಕೆ ಅಪಾಯವೊಡ್ಡಿ ವಾಹನಗಳ ಮೇಲೆ ಅಪಾಯಕಾರಿ ಸ್ಟಂಟ್ ಗಳನ್ನು ಮಾಡುವುದು ಒಂದು ಜಗ ಮೆಚ್ಚುವ ಸಾಧನೆ ಅಂತ ಅವರು ಅಂದುಕೊಂಡಿರುವಂತಿದೆ.

ಹಿಂದೆ, ಅಲೋಕ್ ಕುಮಾರ್ ಅವರು ಪೊಲೀಸ್ ಕಮೀಶನರ್ ಆಗಿದ್ದಾಗ ಪುಂಡರು, ರೌಡಿಗಳು ಅವರ ಹೆಸರು ಕೇಳಿಯೇ ಬೆವರುತ್ತಿದ್ದರು. ಈಗ ಅಂಥ ಸ್ಥಿತಿ ಇಲ್ಲ ಅನ್ನೋದೇ ಕಳವಳಕಾರಿ ಅಂಶ ಮಾರಾಯ್ರೇ.

ಇದನ್ನೂ ಓದಿ:  ಬೆಂಗಳೂರಿನಲ್ಲಿ ವ್ಹೀಲಿಂಗ್​ ಮಾಡುತ್ತಿದ್ದ ಆರೋಪಿ ಬಂಧನ; ವೀಲಿಂಗ್ ಮಾಡುವವರ ಬಗ್ಗೆ ಮಾಹಿತಿ ನೀಡಲು ಪೊಲೀಸರ ಮನವಿ