ರಷ್ಯಾದಲ್ಲಿ ಭೀಕರ ಹಿಮಪಾತ; 11 ಪರ್ವತಾರೋಹಿಗಳ ಸಾವು, 6 ಮಂದಿ ನಾಪತ್ತೆ

Updated on: Sep 07, 2026 | 11:13 PM

ಸುಮಾರು 5,000 ಮೀಟರ್ ಎತ್ತರದ ಮಿಝಿರ್ಗಿ ಪರ್ವತದ ಬೆಝೆಂಗಿ ಕಣಿವೆಯಲ್ಲಿ ಒಟ್ಟು 33 ಪರ್ವತಾರೋಹಿಗಳಿದ್ದ ತಂಡ ಸಾಗುತ್ತಿದ್ದಾಗ ಭಾನುವಾರ ಸಂಜೆ 5 ಗಂಟೆಯ ಸುಮಾರಿಗೆ ಹಿಮದ ಬಂಡೆಗಳು ದಿಢೀರನೆ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ 10 ಪರ್ವತಾರೋಹಿಗಳು ಸುರಕ್ಷಿತವಾಗಿ ಬೆಟ್ಟದಿಂದ ಕೆಳಗಿಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ತುರ್ತು ಸೇವೆಗಳ ಪಡೆ ಸೇರಿದಂತೆ 50ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಹಾಗೂ ಹೆಲಿಕಾಪ್ಟರ್‌ಗಳ ಮೂಲಕ ನಾಪತ್ತೆಯಾಗಿರುವ 6 ಜನರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

ಮಾಸ್ಕೋ, ಸೆಪ್ಟೆಂಬರ್ 7: ರಷ್ಯಾದ ದಕ್ಷಿಣ ಭಾಗದಲ್ಲಿರುವ ಕಾಕಸಸ್ ಪರ್ವತ ಶ್ರೇಣಿಯ ‘ಕಬಾರ್ಡಿನೋ-ಬಲ್ಕೇರಿಯಾ’ ಪ್ರದೇಶದ ಮಿಝಿರ್ಗಿ ಪರ್ವತದಲ್ಲಿ ಸಂಭವಿಸಿದ ಭೀಕರ ಹಿಮಪಾತದಿಂದ 11 ಪರ್ವತಾರೋಹಿಗಳು ಮೃತಪಟ್ಟಿದ್ದಾರೆ. 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು 6 ಪರ್ವತಾರೋಹಿಗಳು ನಾಪತ್ತೆಯಾಗಿದ್ದು, ಅವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಹಿಮಪರ್ವತ ಕುಸಿದು ಬೀಳುವ ಭೀಕರ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುಮಾರು 5,000 ಮೀಟರ್ ಎತ್ತರದ ಮಿಝಿರ್ಗಿ ಪರ್ವತದ ಬೆಝೆಂಗಿ ಕಣಿವೆಯಲ್ಲಿ ಒಟ್ಟು 33 ಪರ್ವತಾರೋಹಿಗಳಿದ್ದ ತಂಡ ಸಾಗುತ್ತಿದ್ದಾಗ ಭಾನುವಾರ ಸಂಜೆ 5 ಗಂಟೆಯ ಸುಮಾರಿಗೆ ಹಿಮದ ಬಂಡೆಗಳು ದಿಢೀರನೆ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ 10 ಪರ್ವತಾರೋಹಿಗಳು ಸುರಕ್ಷಿತವಾಗಿ ಬೆಟ್ಟದಿಂದ ಕೆಳಗಿಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ತುರ್ತು ಸೇವೆಗಳ ಪಡೆ ಸೇರಿದಂತೆ 50ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಹಾಗೂ ಹೆಲಿಕಾಪ್ಟರ್‌ಗಳ ಮೂಲಕ ನಾಪತ್ತೆಯಾಗಿರುವ 6 ಜನರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us