ಶಿವಣ್ಣ-ಅಪ್ಪು ಒಟ್ಟಿಗೆ ನಟಿಸುವಂತ ಕತೆ ಮಾಡಿದ್ದೆ: ಎಸ್ ನಾರಾಯಣ್
S Narayan: ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಒಟ್ಟಿಗೆ ನಟಿಸಬೇಕಿದ್ದ ಕತೆಯೊಂದನ್ನು ಎಸ್ ನಾರಾಯಣ್ ಸಿದ್ಧ ಮಾಡಿಟ್ಟುಕೊಂಡಿದ್ದರಂತೆ.
ನಿರ್ದೇಶಕ, ನಟ ಎಸ್ ನಾರಾಯಣ್ (S Narayan) ಅವರು ಬಹಳ ಸಮಯದ ಬಳಿಕ ನಿರ್ದೇಶನಕ್ಕೆ ಮರಳಿದ್ದಾರೆ. ಆದಿತ್ಯ ನಟನೆಯ 5ಡಿ ಸಿನಿಮಾವನ್ನು ಎಸ್ ನಾರಾಯಣ್ ನಿರ್ದೇಶನ ಮಾಡುತ್ತಿದ್ದು, ಇದು ಅವರ ನಿರ್ದೇಶನದ 50ನೇ ಸಿನಿಮಾ. ಎಸ್.ನಾರಾಯಣ್, ಕನ್ನಡಕ್ಕೆ ಕೆಲವು ಕಲ್ಟ್ ಕ್ಲಾಸಿಕ್ಗಳನ್ನು ನೀಡಿದ ನಿರ್ದೇಶಕ. ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸುವ ಕತೆಯೊಂದನ್ನು ನಾರಾಯಣ್ ಸಿದ್ಧಪಡಿಸಿಕೊಂಡಿದ್ದರಂತೆ. ಕತೆ ಹೇಳಲು ಹೋಗಬೇಕು ಅಂದುಕೊಂಡಿದ್ದ ಕೆಲವೇ ದಿನ ಮುಂಚಿತವಾಗಿ ಪುನೀತ್ ಅವರು ಇಹಲೋಕ ತ್ಯಜಿಸಿದರು ಎಂದು ನಾರಾಯಣ್ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos