ಬೆಂಗಳೂರಲ್ಲಿ ತಾಯ್ತ ಎಲ್ಲಿ ಕಟ್ತಾರೆ? ಮಾಹಿತಿ ಕೊಟ್ಟರು ನೋಡಿ ಸಾಧು ಕೋಕಿಲ
Sadhu Kokila: ಹಾಸ್ಯ ನಟ ಸಾಧು ಕೋಕಿಲ ಬೆಂಗಳೂರಲ್ಲಿ ತಾಯ್ತ ಎಲ್ಲಿ ಕಟ್ಟುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಅಂದಹಾಗೆ ಸಾಧು ಕೋಕಿಲ ಯಾಕೆ ತಾಯ್ತದ ಬಗ್ಗೆ ಮಾತನಾಡಿದ್ದಾರೆ?
ನಟ ಸಾಧು ಕೋಕಿಲ (Sadhu Kokila) ಹಿರಿಯ ಹಾಸ್ಯ ನಟ, ಸಂಗೀತ ನಿರ್ದೇಶಕ. ನೂರಾರು ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ನಟಿಸಿರುವ ಸಾಧು ಚಿತ್ರರಂಗವನ್ನು ದಶಕಗಳಿಂದ ಕಂಡಿದ್ದಾರೆ. ಮಾತ್ರವಲ್ಲ ಚಿತ್ರರಂಗ ಸ್ಥಿತವಾಗಿರುವ ಬೆಂಗಳೂರನ್ನು ಸಹ ವರ್ಷಗಳಿಂದಲೂ ನೋಡುತ್ತಾ ಬಂದಿದ್ದಾರೆ. ಇದೀಗ ಸಾಧು ಕೋಕಿಲ ‘ತಾಯ್ತ’ ಹೆಸರಿನ ಹಾರರ್ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಬೆಂಗಳೂರಿನಲ್ಲಿ ತಾಯ್ತ ಎಲ್ಲಿ ಕಟ್ಟುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos