ಸಿಗರೇಟ್ ತಂದು ಕೊಡದ್ದಕ್ಕೆ ಟೆಕ್ಕಿಯನ್ನು ಕೊಂದ ಬೆಂಗಳೂರಿನ ಖಾಸಗಿ ಕಂಪನಿಯೊಂದರ ಸೇಲ್ಸ್ ಮ್ಯಾನೇಜರ್
ಆರೋಪಿಯ ಅಹಂಕಾರ, ದರ್ಪ ಮತ್ತು ಕ್ರಿಮಿನಲ್ ಮನಸ್ಥಿತಿಯನ್ನು ಗಮನಿಸಿ. ಹುಟ್ಟಿಸಿದ ಅಪ್ಪ ಹೇಳಿದ ಮಾತನ್ನು ಮಕ್ಕಳು ಕೇಳದ ಜಮಾನಾದಲ್ಲಿ ನಾವಿದ್ದೇವೆ. ಅಂಥದರಲ್ಲಿ ಇವನು ಕಾರಲ್ಲಿ ಕೂತು ತನ್ನ ಹೆಂಡತಿಯ ಮುಂದೆ ಗತ್ತು ಪ್ರದರ್ಶಿಸಲು, ಯುವಕರಿಗೆ ಸಿಗರೇಟು ತಂದುಕೊಡುವಂತೆ ಹೇಳಿದ್ದಾನೆ. ಅವನಿಗೆ ಮೈ ತುಂಬಾ ಕೊಲೆಸ್ಟ್ರಾಲ್ ಅಂತ ಕಾಣುತ್ತೆ. ಪೊಲೀಸರು ಅವನನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ್ದಾರೆ.
ಬೆಂಗಳೂರು, ಮೇ 17: ನಗರದಲ್ಲಿ ಇಂಥ ಕ್ಷುಲ್ಲಕ ವಿಚಾರಗಳಿಗೂ ಕೊಲೆ ನಡೆಯುತ್ತವಲ್ಲ ಅಂತ ಆಶ್ಚರ್ಯವಾಗುತ್ತದೆ. ಮೇ 10 ರಂದು ಕೋಣನಕುಂಟೆ ಏರಿಯಾದ ಸುಬ್ರಹ್ಮಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬಸ್ ಸ್ಟಾಪ್ ಬಳಿ ಬೆಳಗ್ಗೆ ಸುಮಾರು 4 ಗಂಟೆಗೆ ಒಂದು ಕೊಲೆ ನಡೆದಿದೆ. ನಮ್ಮ ವರದಿಗಾರ ಅಪರಾಧ ನಡೆದ ಸ್ಪಾಟ್ ನಿಂದ ಮಾಹಿತಿ ನೀಡಿದ್ದಾರೆ. ಮೈದಾ ಹಿಟ್ಟಿನ ಕಂಪನಿಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ (sales manager) ಆಗಿ ಕೆಲಸ ಮಾಡುವ ಆರೋಪಿ ಮತ್ತು ಅವನ ಹೆಂಡತಿ ಕೊಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಟೀ ಕುಡಿಯುತ್ತ ನಿಂತಿದ್ದ ಚೇತನ್ ಮತ್ತು ಸಂಜಯ್ ಹೆಸರಿನ ಇಬ್ಬರು ಟೆಕ್ಕಿಗಳಿಗೆ ಆರೋಪಿಯು ಕಾರಲ್ಲಿ ಬಂದು ಟೀ ಅಂಗಡಿಗೆ ಮುಂದೆ ನಿಲ್ಲಿಸಿ ಕಾರಿಂದ ಇಳಿಯದೆ ಟೀ ಕುಡಿಯುತ್ತಿದ್ದವರಿಗೆ ಸಿಗರೇಟ್ ತಂದುಕೊಡುವಂತೆ ಹೇಳಿದ್ದಾನೆ. ಚೇತನ್ ಮತ್ತು ಸಂಜಯ್ ನಿರಾಕರಿಸಿದಾಗ ಮಾತಿಗೆ ಮಾತು ಬೆಳೆದಿದೆ. ನಂತರ ಟೆಕ್ಕಿಗಳು ತಮ್ಮ ಬೈಕ್ನಲ್ಲಿ ಅಲ್ಲಿಂದ ಹೊರಟಾಗ ಅರೋಪಿಯು ಕಾರನ್ನು ವೇಗವಾಗಿ ಓಡಿಸಿ ಬೈಕ್ಗೆ ಗುದ್ದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಸಂಜಯ್ ಎರಡು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಬಿಡದಿ ಬಳಿ ದಿವ್ಯಾಂಗ ಅಪ್ರಾಪ್ತೆಯೊಬ್ಬಳ ಅಸಹಜ ಸಾವು, ಕೊಲೆ ಎನ್ನುತ್ತಿರುವ ಕುಟುಂಬ, ಸಂಸದ ಮಂಜುನಾಥ್ ಭೇಟಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಕೂಟಿಗೆ ಡಿಕ್ಕಿ ಹೊಡೆದ ಹಂದಿಗಳ ಹಿಂಡು; ಮಹಿಳೆಯ ಹೆಲ್ಮೆಟ್ ಛಿದ್ರ!

ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?

ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್

ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
