ಬಳ್ಳಾರಿಯಲ್ಲಿ ಮಾಸ್ಕ್ ಧರಿಸದ ಸಾವಿರಾರು ಅಭಿಮಾನಿಗಳಿಂದ ಮಾಸ್ಕಿಲ್ಲದ ಚಿತ್ರನಟ ಧನಂಜಯಗೆ ಅದ್ದೂರಿ ಸ್ವಾಗತ!

ಬಳ್ಳಾರಿ ನಟರಾಜ ಚಿತ್ರಮಂದಿರದ ಬಳಿ ಮಂಗಳವಾರ ನೆರೆದಿದ್ದ ಜನಸಾಗರದಲ್ಲಿ ಶೇಕಡಾ 90 ರಷ್ಟು ಜನ ವಿದ್ಯಾರ್ಥಿಗಳಾಗಿದ್ದರು. ಆದರೆ ವಿಷಾದಕರ ಸಂಗತಿಯೆಂದರೆ, ಯಾರ ಮುಖದ ಮೇಲೂ ಮಾಸ್ಕ್ ಇರಲಿಲ್ಲ. ಅಷ್ಟ್ಯಾಕೆ ಖುದ್ದು ಧನಂಜಯ ಸಹ ಮಾಸ್ಕ್ ಧರಿಸಿರಲಿಲ್ಲ!

TV9kannada Web Team

| Edited By: Arun Belly

Jan 05, 2022 | 12:37 AM

ನಟ, ಗೀತ ರಚನೆಕಾರ ಮತ್ತು ಈಗ ನಿರ್ಮಾಪಕರೂ ಆಗಿರುವ ಧನಂಜಯ ಮಂಗಳವಾರದಂದು ತಮ್ಮ ನಿರ್ಮಾಣದ ‘ಬಡವ ಱಸ್ಕಲ್’ ಚಿತ್ರದ ಪ್ರಮೋಶನ್ ಗೋಸ್ಕರ ಗಣಿನಾಡು ಬಳ್ಳಾರಿಗೆ ಹೋಗಿದ್ದರು. ನಗರದ ನಟರಾಜ ಥೇಟರ್ ಬಳಿ ಅವರಿಗೆ ಸ್ವಾಗತಿಸಲು ನೆರೆದಿದ್ದ ನೂರಾರು ಅಭಿಮಾನಿಗಳನ್ನು ಕಂಡು ಖುದ್ದು ಧನಂಜಯ ಅವರೇ ದಂಗಾಗಿರಬಹುದು. ಎಲ್ಲರಿಗೂ ತಮ್ಮ ಮೆಚ್ಚಿನ ನಟನೊಂದಿಗೆ ಒಂದು ಸೆಲ್ಫೀ ತೆಗೆದುಕೊಳ್ಳುವ ತವಕ. ಆದರೆ, ಅಷ್ಟು ಜನರ ನಡುವೆ ಅವರ ಆಸೆಯನ್ನು ಪೂರ್ತಿಗೊಳಿಸುವುದು ಸಾಧ್ಯವಿರಲಿಲ್ಲ. ಹಾಗಾಗಿ ಅವರು ಎತ್ತರದ ಸ್ಥಳವೊಂದರ ಮೇಲೆ ನಿಂತು ಅವರಿಗೆ ಕೈ ಜೋಡಿಸಿ ನಮಸ್ಕರಿಸಿದರು ಮತ್ತು ಕೈ ಬೀಸಿ ಅವರು ತೋರಿದ ಪ್ರೀತಿಗೆ ಕತಜ್ಞತೆ ವ್ಯಕ್ತಪಡಿಸಿದರು. ಸುಮಾರು ಏಳು ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿರುವ ಧನಂಜಯ ಅವರು ಕೆಲ ಉತ್ತಮ ಚಿತ್ರಗಳನ್ನು ನೀಡಿದ್ದಾರೆ, ಅವರ ಇತ್ತೀಚಿನ ‘ರತ್ನನ್ ಪ್ರಪಂಚ’ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಸರಿ, ಬಳ್ಳಾರಿ ನಟರಾಜ ಚಿತ್ರಮಂದಿರದ ಬಳಿ ಮಂಗಳವಾರ ನೆರೆದಿದ್ದ ಜನಸಾಗರದಲ್ಲಿ ಶೇಕಡಾ 90 ರಷ್ಟು ಜನ ವಿದ್ಯಾರ್ಥಿಗಳಾಗಿದ್ದರು. ಆದರೆ ವಿಷಾದಕರ ಸಂಗತಿಯೆಂದರೆ, ಯಾರ ಮುಖದ ಮೇಲೂ ಮಾಸ್ಕ್ ಇರಲಿಲ್ಲ. ಅಷ್ಟ್ಯಾಕೆ ಖುದ್ದು ಧನಂಜಯ ಸಹ ಮಾಸ್ಕ್ ಧರಿಸಿರಲಿಲ್ಲ! ಇವರೆಲ್ಲ ಸೇರಿ ಏನು ಸಾಧಿಸಬೇಕು ಅಂದುಕೊಂಡಿದ್ದಾರೆ ಅನ್ನೋದು ಉಳಿದವರಿಗೆ ಅರ್ಥವಾಗುತ್ತಿಲ್ಲ.

ಕೋವಿಡ್-19 ಮೂರನೇ ಅಲೆ ಈಗಾಗಲೇ ಶುರುವಾಗಿದೆ, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಪ್ರಜ್ಞಾವಂತಿಕೆ, ವಿವೇಕ ಮತ್ತು ವಿವೇಚನೆಯನ್ನು ಮನೆಯಲ್ಲಿ ಬಿಟ್ಟು ನಾವು ಹೊರಬರುವಂತಿಲ್ಲ. ಓಕೆ ಅವನ್ನು ಬಿಟ್ಟರೂ ಮಾಸ್ಕನ್ನು ಮಾತ್ರ ಮರೆಯಬಾರದು!

ಇದನ್ನೂ ಓದಿ:   ಚಿತ್ರಮಂದಿರ, ಮಾಲ್, ಬಾರ್, ಪಬ್​ಗಳಿಗೆ 50:50 ನಿಯಮ ಜಾರಿ; ಕೊರೊನಾ ಮಾರ್ಗಸೂಚಿಯ ವಿವರ ಇಲ್ಲಿದೆ

Follow us on

Click on your DTH Provider to Add TV9 Kannada