‘ನಿಮ್ಮ ಲೈಫ್ಗೆ ನಾನೇ ಶನಿ ಆಗ್ತೀನಿ’; ಕಾರ್ತಿಕ್ಗೆ ನೇರ ಮಾತಲ್ಲಿ ಹೇಳಿದ ಸಂಗೀತಾ ಶೃಂಗೇರಿ
ಮೊದಲು ಕಾರ್ತಿಕ್ಗೆ ‘ನೀವು ಎಲ್ಲರನ್ನೂ ಬಳಸಿಕೊಳ್ಳುತ್ತೀರಿ’ ಎಂಬ ಆರೋಪವನ್ನು ಮಾಡಿದರು. ಜೊತೆಗೆ ‘ನಾನು ನಿಮ್ಮ ಬಾಳಲ್ಲಿ ಶನಿ ಆಗಿದ್ದೀನಿ, ಮುಂದೆಯೂ ಆಗಿರ್ತೀನಿ’ ಎಂದು ನೇರ ಮಾತಲ್ಲಿ ಹೇಳಿದರು ಸಂಗೀತಾ.
ಸಂಗೀತಾ ಶೃಂಗೇರಿ (Sangeetha Sringeri) ಅವರನ್ನು ಶನಿ ಎಂದು ಕರೆದಿದ್ದರು ಕಾರ್ತಿಕ್. ಇದನ್ನು ಕೇಳಿ ಸಂಗೀತಾ ಸಿಟ್ಟಾಗಿದ್ದರು. ಈಗ ಅವರು ಕಾರ್ತಿಕ್ ಮೇಲಿರುವ ಕೋಪವನ್ನು ತೀರಿಸಿಕೊಂಡಿದ್ದಾರೆ. ಬಾಕ್ಸಿಂಗ್ ಗ್ಲೌಸ್ ಹಾಕಿ ಸ್ಪರ್ಧಿಗಳ ಭಾವ ಚಿತ್ರಕ್ಕೆ ಗುದ್ದೋಕೆ ಅವಕಾಶವನ್ನು ಬಿಗ್ ಬಾಸ್ ನೀಡಿದ್ದರು. ಆಗ ಸಂಗೀತಾ ಅವರು ಕಾರ್ತಿಕ್ ಬಗ್ಗೆ ಇರೋ ಕೋಪ ತೀರಿಸಿಕೊಂಡರು. ‘ಕಾರ್ತಿಕ್ ಎಲ್ಲರನ್ನೂ ಬಳಸಿಕೊಳ್ಳುತ್ತಾರೆ’ ಎಂಬ ಆರೋಪವನ್ನು ಮಾಡಿದರು. ಜೊತೆಗೆ ‘ನಾನು ನಿಮ್ಮ ಬಾಳಲ್ಲಿ ಶನಿ ಆಗಿದ್ದೀನಿ, ಮುಂದೆಯೂ ಆಗಿರ್ತೀನಿ’ ಎಂದರು. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ