ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ, ಬದಲಾವಣೆ ಅಗತ್ಯವಿಲ್ಲ; ಸಂತೋಷ್ ಲಾಡ್
ವಿಷಯ ಯಾವುದೇ ಆಗಿರಲಿ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಹಳ ವಿವೇಕ ಮತ್ತು ವಿವೇಚನೆ ಬಳಸಿ ಮಾತಾಡುತ್ತಾರೆ. ಸ್ವಾಮೀಜಿಗಳು ನೀಡುತ್ತಿರುವ ಹೇಳಿಕೆಗಳ ಬಗ್ಗೆ ಮಾತಾಡುವುದು ಸರಿಯಲ್ಲ ಅನ್ನೋದು ಅವರಿಗೆ ಚೆನ್ನಾಗಿ ಗೊತ್ತಿದೆ. ತನ್ನ ಹೇಳಿಕೆ ವಿವಾದ ಸೃಷ್ಟಿಸಬಹುದೆಂಬ ಪರಿಜ್ಞಾನ ಅವರಿಗಿದೆ.
ಹುಬ್ಬಳ್ಳಿ: ಹೆಚ್ಚುವರಿ ಡಿಸಿಎಂಗಳ ಕೂಗು ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆ ಮತ್ತು ಸ್ವಾಮೀಜಿಗಳು ಮತ್ತು ಮಠಾಧೀಶರು ಸಿಎಂ ಬದಲಾವಣೆ ಬಗ್ಗೆ ನೀಡುತ್ತಿರುವ ಹೇಳಿಕೆಗಳಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಂದು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದರು. ಸ್ವಾಮೀಜಿಗಳು ಯಾಕೆ ಸಿಎಂ ಬದಲಾವಣೆ ಬಗ್ಗೆ ಮಾತಾಡುತ್ತಿದ್ದಾರೋ ಗೊತ್ತಿಲ್ಲ, ಅವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಲಾರೆ, ಅದರೆ ಖುದ್ದು ಮುಖ್ಯಮಂತ್ರಿಯವರೇ ಸ್ಪಷ್ಟಪಡಿಸಿರುವ ಹಾಗೆ ಅವರು ಪ್ರಜಾತಂತ್ರ ವ್ಯವಸ್ಥೆಯ ಆಧಾರದಲ್ಲಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿ ಹೈಕಮಾಂಡ್ ನಿಂದ ನಿಯುಕ್ತರಾಗಿರುವ ಮುಖ್ಯಮಂತ್ರಿಯಾಗಿದ್ದಾರೆ ಎಂದು ಲಾಡ್ ಹೇಳಿದರು. ಬಿಜೆಪಿಯವರಿಗೆ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ವಿಷಯದಲ್ಲಿ ಮಾತಾಡುವ ಹಕ್ಕಿಲ್ಲ, ಯಾಕೆಂದರೆ ಅವರ ಅಧಿಕಾರಾವಧಿಯಲ್ಲಿ ಎಷ್ಟು ಡಿಸಿಎಂಗಳಿದ್ದರು ಅನ್ನೋದು ನಮಗೆ ಗೊತ್ತಿದೆ, ಕಾಂಗ್ರೆಸ್ ಶಾಸಕರು ಮಂತ್ರಿಗಳು ಇನ್ನೂ ಡಿಸಿಎಂಗಳು ಬೇಕು ಎಂದು ಕೇಳುವ ಹಕ್ಕು ಹೊಂದಿದ್ದಾರೆ, ಅದರೆ ಬೇಡಿಕೆ ಮನ್ನಿಸುವುದು ಬಿಡೋದು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ಲಾಡ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ ಮತ್ತು ಶಾಸಕರು