ಬೆಂಗಳೂರಿಗೆ ಹೊಸ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ಕೇಂದ್ರ ಸಚಿವ ವಿ ಸೋಮಣ್ಣ
ಮುಂದಿನ ವರ್ಷಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತ ಗ್ರಾಮಗಳ ಜನಸಂಖ್ಯೆಯು 1.40 ಕೋಟಿ ದಾಟಲಿದ್ದು ಹೊಸ ಹೊಸ ಸಂಪರ್ಕ ವ್ಯವಸ್ಥೆಯನ್ನು ಜಾರಿಗೊಳಿಸುವ ಅವಶ್ಯಕತೆಯಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದರು. ರೇಲ್ವೆ ಇಲಾಖೆಗೆ ಈಗಷ್ಟೇ ಮಂತ್ರಿಯಾಗಿರುವುದರಿಂದ ಹೆಚ್ಚಿನ ಪ್ರಶ್ನೆ ಕೇಳಬೇಡಿ, ಮುಂದಿನ ಸಲ ಬಂದಾಗ ತಯಾರಿ ಮಾಡಿಕೊಂಡು ಬರುತ್ತೇನೆ ಎಂದು ಹೇಳಿ ಸೋಮಣ್ಣ ಪ್ರಾಮಾಣಿಕತೆಯನ್ನು ಮೆರೆದರು.
ಬೆಂಗಳೂರು: ನಗರದ ಖಾಸಗಿ ಹೋಟೆಲೊಂದರಲ್ಲಿ ಇಂದು ಮಹತ್ತರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಅಯೋಜಿಸಿ ಮಾತಾಡಿದ ಕೇಂದ್ರ ರೇಲ್ವೇ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ ಅವರು ರಾಜ್ಯಕ್ಕೆ ಅದರಲ್ಲೂ ವಿಶೇಷವಾಗಿ ಬೆಂಗಳೂರಿಗೆ ಒಂದು ಹೊಸ ರೇಲ್ವೇ ಯೋಜನೆಯನ್ನು ಘೋಷಿಸಿದರು. ಸಬ್-ಅರ್ಬನ್ ರೈಲುಯೋಜನೆ ಹೊರತಾಗಿ ಅದರಿಂದ 10 ಕೀಮೀ ದೂರದ ಅಂತರದಲ್ಲಿ ಹೊಸ ಸರ್ಕ್ಯೂಲರ್ ರೇಲ್ವೇ ಯೋಜನೆಗಾಗಿ ನೀಲಿನಕ್ಷೆ ತಯಾರಿಸಲಾಗುತ್ತಿದೆ ಎಂದು ಸೋಮಣ್ಣ ಹೇಳಿದರು. ಇದು 287 ಕಿಮೀ ಉದ್ದದ ರೈಲು ಯೋಜನೆಯಾಗಿದ್ದು ವಡ್ಡರಹಳ್ಳಿ, ದೇವನಹಳ್ಳಿ, ಮಾಲೂರು, ಕೋಳೂರು ಮಾರ್ಗವಾಗಿ ಚಲಿಸುತ್ತ ಬೆಂಗಳೂರು ನಗರದ ಪ್ರಮುಖ ರಸ್ತೆ ಮತ್ತು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿದೆ ಎಂದು ಸಚಿವರ ಹೇಳಿದರು. ಸರ್ಕ್ಯೂಲರ್ ರೈಲು ಯೋಜನೆಗೆ ಸುಮಾರು ರೂ. 23,000 ಕೋಟಿ ವೆಚ್ಚ ತಗುಲಲಿದ್ದು ಅದನ್ನು ಕೇಂದ್ರ ಸರ್ಕಾರವೇ ಭರಿಸಲಿದೆ, ಭೂಮಿ ಒದಗಿಸುವ ಹೊಣೆಗಾರಿಕೆ ಮಾತ್ರ ರಾಜ್ಯ ಸರ್ಕಾರದ ಮೇಲಿರುತ್ತದೆ ಎಂದು ಸೋಮಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತುಮಕೂರು ಲೋಕಸಭಾ ಚುನಾವಣೆ 2024 ಫಲಿತಾಂಶ: ವಿ ಸೋಮಣ್ಣ ಗೆಲುವು, ರಾಜ್ಯದಿಂದ ರಾಷ್ಟ್ರ ರಾಜಕಾರಣದತ್ತ