ಮೈಸೂರಿನ ವಿಜಯನಗರದಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಸಿದಂತೆ ಮಾತ್ರ ಸ್ಯಾಂಟ್ರೋ ರವಿಯನ್ನು ಪ್ರಶ್ನಿಸಲಾಗಿದೆ: ಅಲೋಕ್ ಕುಮಾರ್, ಎಡಿಜಿಪಿ
ಕೋರ್ಟ್ ಮುಂದೆ ಹಾಜರುಪಡಿಸಿದ ಬಳಿಕ ಪೊಲೀಸ್ ಕಸ್ಟಡಿ ಕೇಳಲಾಗುವುದು ಅದು ಸಿಕ್ಕ ಬಳಿಕ ಬೇರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುವುದು ಎಂದು ಅಲೋಕ್ ಕುಮಾರ್ ಹೇಳಿದರು.
ಮೈಸೂರು: ಸ್ಯಾಂಟ್ರೋ ರವಿಯ (Santro Ravi) ವಿಚಾರಣೆ ಕುರಿತು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ (Alok Kumar) ಮಾಧ್ಯಮಗಳಿಗೆ ವಿವರ ನೀಡಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ (Vijayanagar police station) ದಾಖಲಾಗಿರುವ ಪ್ರಕರಣ ಮತ್ತು ಅವನನ್ನು ಪತ್ತೆ ಮಾಡುವಾಗ ಪೊಲೀಸರಿಗೆ ಸಿಕ್ಕ ವಸ್ತುಗಳು ಮತ್ತು ಮಾಹಿತಿಯ ಬಗ್ಗೆ ಮಾತ್ರ ಅವನನ್ನು ಪ್ರಶ್ನಿಸಲಾಗುತ್ತಿದೆ. ಕೋರ್ಟ್ ಮುಂದೆ ಹಾಜರುಪಡಿಸಿದ ಬಳಿಕ ಪೊಲೀಸ್ ಕಸ್ಟಡಿ ಕೇಳಲಾಗುವುದು ಅದು ಸಿಕ್ಕ ಬಳಿಕ ಬೇರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುವುದು ಎಂದು ಅಲೋಕ್ ಕುಮಾರ್ ಹೇಳಿದರು. ರವಿ ನಿಯಮಿತವಾಗಿ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವುದರಿಂದ ಅದರ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos