ಸಿದ್ದರಾಮಯ್ಯ ಆಪ್ತರೇ ಸಹಿ ಸಂಗ್ರಹಿಸಿ ಬೆನ್ನಿಗೆ ಚೂರಿ ಹಾಕಿದ್ರಾ? ಜಾರಕಿಹೊಳಿ ಏನಂದ್ರು ನೋಡಿ
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್‌ನ ಒಪ್ಪಂದದಂತೆ ನಡೆದಿದೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ಸಹಿ ಸಂಗ್ರಹ ಆರೋಪಗಳನ್ನು ಅವರು ತಳ್ಳಿಹಾಕಿದರು. ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿಯೇ ಇರಲಿದ್ದಾರೆ ಮತ್ತು ಅವರ ಅನುಭವವನ್ನು ಹೊಸ ಸರ್ಕಾರ ರಚನೆಯಾದ ನಂತರ ಸೂಕ್ತ ಸಮಯದಲ್ಲಿ ಬಳಸಿಕೊಳ್ಳಲಾಗುವುದು ಎಂದರು.
ಬೆಂಗಳೂರು, ಮೇ 29: ಸಿದ್ದರಾಮಯ್ಯ ಬೆನ್ನಿಗೆ ಅವರ ಆಪ್ತರು ಚೂರಿ ಹಾಕಿದ ಆರೋಪಗಳಿಗೆ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್‌ನ ಪೂರ್ವ ನಿರ್ಧರಿತ ಒಪ್ಪಂದದಂತೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಇದು ಯಾವುದೇ ರೀತಿಯ ಆಂತರಿಕ ರಾಜಕೀಯ ಸಂಘರ್ಷದ ಪ್ರಶ್ನೆಯೇ ಅಲ್ಲ ಎಂದು ಜಾರಕಿಹೊಳಿ ದೃಢಪಡಿಸಿದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆದಿರುವ ವರದಿಗಳನ್ನು, ಆರೋಪಗಳನ್ನು ಸುಳ್ಳು ಎಂದು ಜಾರಕಿಹೊಳಿ ತಳ್ಳಿಹಾಕಿದರು. ಅಂತಹ ಯಾವುದೇ ಸಹಿ ಹೈಕಮಾಂಡ್‌ಗೆ ತಲುಪಿಲ್ಲ ಅಥವಾ ಅದರ ಬಗ್ಗೆ ಚರ್ಚೆಯೂ ನಡೆದಿಲ್ಲ ಎಂದರು. ಇದು ಯಾರೋ ವಾಟ್ಸ್‌ಆ್ಯಪ್ ಅಥವಾ ಟ್ವೀಟರ್‌ನಲ್ಲಿ ಹರಿಬಿಟ್ಟ ಸುಳ್ಳು ಸುದ್ದಿ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಅನುಪಸ್ಥಿತಿ ಕಾಂಗ್ರೆಸ್‌ಗೆ ಕಾಡುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ರಾಜ್ಯ ರಾಜಕಾರಣದಲ್ಲಿಯೇ ಇರಲಿದ್ದಾರೆ ಎಂದರು. 2028ರಲ್ಲಿ ಪಕ್ಷವನ್ನು ಗೆಲ್ಲಿಸಲು ಕೆಲಸ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಹೊಸ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ರಚನೆಯಾದ ನಂತರ ಅವರ ಅನುಭವವನ್ನು ಪಕ್ಷವು ಸೂಕ್ತ ಸಮಯದಲ್ಲಿ ಬಳಸಿಕೊಳ್ಳಲಿದೆ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


