ಅಪ್ಪು ಹೇಳಿದ ಕಿವಿಮಾತು ನೆನಪಿಸಿಕೊಂಡ ನಿರ್ದೇಶಕ ಸತ್ಯಪ್ರಕಾಶ್​

ಅಪ್ಪು ಹೇಳಿದ ಕಿವಿಮಾತು ನೆನಪಿಸಿಕೊಂಡ ನಿರ್ದೇಶಕ ಸತ್ಯಪ್ರಕಾಶ್​

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 06, 2022 | 9:00 PM

‘ಅಪ್ಪು ಸರ್​ ಮುಂದೆ ಕುಳಿತಾಗೆಲ್ಲ ಅವರು ಒಂದೇ ಮಾತು ಹೇಳುತ್ತಿದ್ದರು. ಸಿನಿಮಾ ಎಂದರೆ ಅದು ಬಿಸ್​ನೆಸ್​ ಎನ್ನುತ್ತಿದ್ದರು’ ಎಂದು ಸತ್ಯಪ್ರಕಾಶ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರು ನಿಧನ ಹೊಂದಿರುವ ವಿಚಾರ ಕರ್ನಾಟಕದ ಜನತೆಗೆ ತುಂಬಾನೇ ನೋವು ತಂದಿದೆ. ಅವರನ್ನು ಕಳೆದುಕೊಂಡು ಎರಡು ತಿಂಗಳ ಕಳೆದ ಹೊರತಾಗಿಯೂ ಅಪ್ಪುನ ನೆನಪಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ಈಗ ನಿರ್ದೇಶಕ ಸತ್ಯಪ್ರಕಾಶ್​ ಅವರು ಕೂಡ ಪುನೀತ್​ ಅವರನ್ನು ನೆನಪಿಸಿಕೊಂಡಿದ್ದಾರೆ. ‘ರಾಮಾ ರಾಮಾ ರೇ’ ಸಿನಿಮಾ ಮೂಲಕ ಸತ್ಯಪ್ರಕಾಶ್ ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರ ಮೊದಲ ಸಿನಿಮಾ ನಿರ್ಮಾಣ ಮಾಡೋಕೆ ಯಾರೂ ಮುಂದೆ ಬರುತ್ತಿರಲಿಲ್ಲ. ಈ ವೇಳೆ ಪುನೀತ್​ ಹೇಳಿದ ಕಿವಿಮಾತನ್ನು ಅವರು ನೆನಪಿಸಿಕೊಂಡಿದ್ದಾರೆ. ‘ಅಪ್ಪು ಸರ್​ ಮುಂದೆ ಕುಳಿತಾಗೆಲ್ಲ ಅವರು ಒಂದೇ ಮಾತು ಹೇಳುತ್ತಿದ್ದರು. ಸಿನಿಮಾ ಎಂದರೆ ಅದು ಬಿಸ್​ನೆಸ್​ ಎನ್ನುತ್ತಿದ್ದರು’ ಎಂದು ಸತ್ಯಪ್ರಕಾಶ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸತ್ಯಪ್ರಕಾಶ್ ಅವರು  ವಿತರಕರಾಗಿ ಕೆಲಸ ಆರಂಭಿಸಿದ್ದಾರೆ.

ಇದನ್ನೂ ಓದಿ: ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ವೇಗದ ಚಿತ್ರಕಾರ ವಿಲಾಸ್​ ನಾಯಕ್​ ಕುಂಚದಲ್ಲಿ ಮೂಡಿದ ಪುನೀತ್​ ರಾಜಕುಮಾರ್ ಭಾವಚಿತ್ರ