ಅಪ್ಪು ಹೇಳಿದ ಕಿವಿಮಾತು ನೆನಪಿಸಿಕೊಂಡ ನಿರ್ದೇಶಕ ಸತ್ಯಪ್ರಕಾಶ್
‘ಅಪ್ಪು ಸರ್ ಮುಂದೆ ಕುಳಿತಾಗೆಲ್ಲ ಅವರು ಒಂದೇ ಮಾತು ಹೇಳುತ್ತಿದ್ದರು. ಸಿನಿಮಾ ಎಂದರೆ ಅದು ಬಿಸ್ನೆಸ್ ಎನ್ನುತ್ತಿದ್ದರು’ ಎಂದು ಸತ್ಯಪ್ರಕಾಶ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ನಿಧನ ಹೊಂದಿರುವ ವಿಚಾರ ಕರ್ನಾಟಕದ ಜನತೆಗೆ ತುಂಬಾನೇ ನೋವು ತಂದಿದೆ. ಅವರನ್ನು ಕಳೆದುಕೊಂಡು ಎರಡು ತಿಂಗಳ ಕಳೆದ ಹೊರತಾಗಿಯೂ ಅಪ್ಪುನ ನೆನಪಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ಈಗ ನಿರ್ದೇಶಕ ಸತ್ಯಪ್ರಕಾಶ್ ಅವರು ಕೂಡ ಪುನೀತ್ ಅವರನ್ನು ನೆನಪಿಸಿಕೊಂಡಿದ್ದಾರೆ. ‘ರಾಮಾ ರಾಮಾ ರೇ’ ಸಿನಿಮಾ ಮೂಲಕ ಸತ್ಯಪ್ರಕಾಶ್ ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರ ಮೊದಲ ಸಿನಿಮಾ ನಿರ್ಮಾಣ ಮಾಡೋಕೆ ಯಾರೂ ಮುಂದೆ ಬರುತ್ತಿರಲಿಲ್ಲ. ಈ ವೇಳೆ ಪುನೀತ್ ಹೇಳಿದ ಕಿವಿಮಾತನ್ನು ಅವರು ನೆನಪಿಸಿಕೊಂಡಿದ್ದಾರೆ. ‘ಅಪ್ಪು ಸರ್ ಮುಂದೆ ಕುಳಿತಾಗೆಲ್ಲ ಅವರು ಒಂದೇ ಮಾತು ಹೇಳುತ್ತಿದ್ದರು. ಸಿನಿಮಾ ಎಂದರೆ ಅದು ಬಿಸ್ನೆಸ್ ಎನ್ನುತ್ತಿದ್ದರು’ ಎಂದು ಸತ್ಯಪ್ರಕಾಶ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಸತ್ಯಪ್ರಕಾಶ್ ಅವರು ವಿತರಕರಾಗಿ ಕೆಲಸ ಆರಂಭಿಸಿದ್ದಾರೆ.
ಇದನ್ನೂ ಓದಿ: ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ವೇಗದ ಚಿತ್ರಕಾರ ವಿಲಾಸ್ ನಾಯಕ್ ಕುಂಚದಲ್ಲಿ ಮೂಡಿದ ಪುನೀತ್ ರಾಜಕುಮಾರ್ ಭಾವಚಿತ್ರ