ಮೈಸೂರು ದಸರಾ ಮಹೋತ್ಸವ 2025: ಅರಮನೆಗೆ ಎರಡನೇ ಬ್ಯಾಚ್ನ 5 ಆನೆಗಳ ಆಗಮನ, ನಾಳೆಯಿಂದ ತಾಲೀಮು
ಮೈಸೂರು ನಗರವಾಸಿಗಳಿಗೆ ಆನೆಗಳು ಲಾರಿಗಳಲ್ಲಿ ಅರಮನೆಗೆ ಬರೋದನ್ನ ನೋಡೋದೇ ಒಂದು ಖುಷಿ. ಅವುಗಳನ್ನು ನೋಡಿ ಜನ ಕೇಕೆ ಹಾಕುತ್ತಾರೆ, ಚಪ್ಪಾಳೆ ತಟ್ಟುತ್ತಾ ಸ್ವಾಗತಿಸುತ್ತಾರೆ. ರಸ್ತೆ ಬದಿ ನಡೆದುಹೋಗುತ್ತಿದ್ದ ಮಕ್ಕಳು ಅನೆ ಬಂತೊಂದಾನೆ ಅಂತ ಹಾಡುವುದು ಕೇಳಿಸುತ್ತದೆ. ಇವತ್ತು ಆಗಮಿಸಿರುವ ಅನೆಗಳ ತೂಕ ಪರೀಕ್ಷೆ ಮಾಡಲಾಗುತ್ತದೆ, ನಂತರ ಅವುಗಳ ತೂಕಕ್ಕೆ ಅನುಗುಣವಾಗಿ ಪೌಷ್ಠಿಕ ಆಹಾರ ನೀಡಲಾಗುತ್ತದೆ.
ಮೈಸೂರು, ಆಗಸ್ಟ್ 25: ರಾಜ್ಯಾದ್ಯಂತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯ ಬಗ್ಗೆ ಚರ್ಚೆ ನಡೆಯುತ್ತಿರುವಂತೆಯೇ ಜಂಬೂ ಸವಾರಿ ಪಾಲ್ಗೊಳ್ಳಲಿರುವ ಇನ್ನೂ ಐದು ಆನೆಗಳು ಇಂದು ನಗರದಲ್ಲಿರುವ ಅರಮನೆಗೆ ಅಗಮಿಸಿದವು. ಮತ್ತಿಗೋಡು ಆನೆ ಶಿಬಿರದಿಂದ ಶ್ರೀಕಂಠ, ಭೀಮನಕಟ್ಟೆಯಿಂದ ರೂಪಾ ಮತ್ತು ದುಬಾರೆ ಅನೆ ಶಿಬಿರದಿಂದ ಸುಗ್ರೀವ, ಗೋಪಿ ಮತ್ತು ಹೇಮಾವತಿ ಹೆಸರಿನ ಆನೆಗಳು ಇಂದು ಟ್ರಕ್ಕುಗಳಲ್ಲಿ ಬಂದವು. ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಆನೆಗಳಿಗೆ ವಿಶೇಷ ಪೂಜೆ ಮಾಡಿ ಒಳಗೆ ಕರೆದುಕೊಳ್ಳಲಾಯಿತು. ನಾವು ಈಗಾಗಲೇ ವರದಿ ಮಾಡಿರುವಂತೆ ಮೊದಲ ಬ್ಯಾಚ್ನಲ್ಲಿ ಅರಮನೆಗೆ ಆಗಮಿಸಿರುವ ಅಭಿಮನ್ಯು ನೇತೃತ್ವದ 9 ಆನೆಗಳು ತಾಲೀಮು ಆರಂಭಿಸಿ ಎರಡು ವಾರ ಕಳೆದಿದೆ.
ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವ: ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಆಯ್ಕೆ ಪ್ರಕ್ರಿಯೆ ಆರಂಭ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

