ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಡರಾತ್ರಿ ಕರಗ ಉತ್ಸವ ವೀಕ್ಷಿಸಲು ಬಂದಾಗಲೂ ಮೋದಿ ಮೋದಿ ಘೋಷಣೆಗಳು!

|

Updated on: Apr 24, 2024 | 10:09 AM

ಪ್ರತಿವರ್ಷ ಕರಗ ಉತ್ಸವದ ಮೆರವಣಿಗೆ ಇದೇ ದೇವಾಲಯದಿಂದ ಆರಂಭವಾಗುತ್ತದೆ ಮತ್ತು ಅದರ ಉಸ್ತುವಾರಿಯನ್ನು ದೇಗುಲದ ಅರ್ಚಕರು ವಹಿಸಿಕೊಂಡಿರುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭೇಟಿ ಸಾಂಗವಾಗಿ ಪೂರ್ತಿಗೊಳ್ಳುತ್ತದೆ ಅದರೆ ಅವರು ಅಲ್ಲಿಂದ ವಾಪಸ್ಸು ಹೋಗುವಾಗ ಆವರಣದಲ್ಲಿದ್ದ ಕೆಲ ಬೆಜೆಪಿ ಬೆಂಬಲಿಗಯ ಮೋದಿ ಮೋದಿ ಅಂತ ಕೂಗುತ್ತಾರೆ.

ಬೆಂಗಳೂರು: ನಗರದಲ್ಲಿ ನಡೆಯುವ ಸುಪ್ರಸಿದ್ಧ ಕರಗ ಉತ್ಸವ (Karaga Utsav) ನೋಡಲು ರಾತ್ರಿ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಿಂದೆ ಯಾವಾಗಲಾದರೂ ಬಂದ ನೆನಪು ನಮಗಿಲ್ಲ. ಅದರೆ ಮಂಗಳವಾರ ತಡರಾತ್ರಿ ಅವರು ಉತ್ಸವ ನೋಡಲು, ಪಾಲ್ಗೊಳ್ಳಲು ನಗರದ ನಗ್ರತ್ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ (Dharmarayaswamy temple) ಆಗಮಿಸಿದರು. ಮುಖ್ಯಮಂತ್ರಿಯವರನ್ನು ಸುಮಾರು 800 ವರ್ಷಗಳಷ್ಟು ಹಳೆಯ ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳು ಬರಮಾಡಿಕೊಂಡು ಅವರಿಗೆ ಗುಡಿ ಮತ್ತು ಆವರಣದ ಸುತ್ತು ಹಾಕಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಸಿದ್ದರಾಮಯ್ಯ ಜೊತೆ ಅವರ ಭದ್ರತಾ ಸಿಬ್ಬಂದಿ ಮತ್ತು ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಇದ್ದರು. ಪ್ರತಿವರ್ಷ ಕರಗ ಉತ್ಸವದ ಮೆರವಣಿಗೆ ಇದೇ ದೇವಾಲಯದಿಂದ ಆರಂಭವಾಗುತ್ತದೆ ಮತ್ತು ಅದರ ಉಸ್ತುವಾರಿಯನ್ನು ದೇಗುಲದ ಅರ್ಚಕರು ವಹಿಸಿಕೊಂಡಿರುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭೇಟಿ ಸಾಂಗವಾಗಿ ಪೂರ್ತಿಗೊಳ್ಳುತ್ತದೆ ಅದರೆ ಅವರು ಅಲ್ಲಿಂದ ವಾಪಸ್ಸು ಹೋಗುವಾಗ ಆವರಣದಲ್ಲಿದ್ದ ಕೆಲ ಬೆಜೆಪಿ ಬೆಂಬಲಿಗಯ ಮೋದಿ ಮೋದಿ ಅಂತ ಕೂಗುತ್ತಾರೆ. ಸಿದ್ದರಾಮಯ್ಯ ನಗುತ್ತಲೇ ಎಲ್ಲರತ್ತ ಕೈ ಬೀಸಿ ಅಲ್ಲಿಂದ ನಿರ್ಗಮಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ರಾಹುಲ್ ಗಾಂಧಿ ಕಾಯ್ತಿದ್ದಾರೆ: ಜನಾರ್ದನ ರೆಡ್ಡಿ

Published on: Apr 24, 2024 10:07 AM