ಪಕ್ಷದ ವರಿಷ್ಠರು ಸೂಚಿಸಿದರೆ ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂದರು ಹಿರಿಯ ಸಚಿವ ಈಶ್ವರಪ್ಪ

| Updated By: Digi Tech Desk

Updated on: Dec 30, 2021 | 6:13 PM

ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಈಶ್ವರಪ್ಪನವರಿಗೆ ಹಿಂದುಳಿದ ವರ್ಗಗಳ ಮೋರ್ಚಾದ ಜವಾಬ್ದಾರಿವಹಿಸಿಕೊಳ್ಳುವಂತೆ ಹೇಳಿದ್ದಾರಂತೆ.

ರಾಜ್ಯ ಸಚಿವ ಸಂಪುಟದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಸಂಗತಿ ಮುನ್ನೆಲೆಗೆ ಬರುತ್ತಿದ್ದಂತೆ ಮತ್ತು ಕಿರಿಯರಿಗೆ ಸಂಪುಟದಲ್ಲಿ ಕಿರಿಯರಿಗೆ ಅವಕಾಶ ಕಲ್ಪಿಸಬೇಕು ಅಂತ ಹೊನ್ನಾಳಿ ಶಾಸಕ ಎಮ್ ಪಿ ರೇಣುಕಾಚಾರ್ಯ ಹೇಳಿದ ಬಳಿಕ ವಯಸ್ಸಿನಲ್ಲಿ ಹಿರಿಯರಾಗಿರುವ ಒಂದೆರಡು ಸಚಿವರ ಕುರ್ಚಿ ಅಲುಗಾಡಲಾರಂಭಿಸಿದೆ. ಸಚಿವ ಸ್ಥಾನ ಕಳೆದಕೊಳ್ಳಬಹುದಾದ ಸಚಿವರ ಪೈಕಿ ಜಾಸ್ತಿ ಕೇಳಿಬರುತ್ತಿರುವ ಹೆಸರೆಂದರೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪನವರದ್ದು. ಆದರೆ, ಈ ಬೆಳವಣಿಗೆಯಿಂದ ಸಚಿವರು ವಿಚಲಿತರಾದಂತೆ ಕಂಡುಬರುತ್ತಿಲ್ಲ. ಅಥವಾ ಅವರು ಹಾಗೆ ತೋರಿಸಿಕೊಳ್ಳುವ ಪ್ರಯತ್ನ ಮಾಡಿದ್ದರೂ ಆಶ್ಚರ್ಯಪಡಬೇಕಿಲ್ಲ. ಸಚಿವ ಸ್ಥಾನ ಕಳೆದುಕೊಳ್ಳಲು ಯಾರು ತಾನೆ ಇಷ್ಟಪಟ್ಟಾರು ಮಾರಾಯ್ರೇ? ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತಾಡಿದ ಈಶ್ವರಪ್ಪನವರು, ಪಕ್ಷ ಏನೇ ತೀರ್ಮಾನ ತೆಗೆದುಕೊಂಡರೂ ತಾವು ಅದಕ್ಕೆ ಬದ್ಧರಾಗಿರುವುದಾಗಿ ಹೇಳಿದರು.

ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಈಶ್ವರಪ್ಪನವರಿಗೆ ಹಿಂದುಳಿದ ವರ್ಗಗಳ ಮೋರ್ಚಾದ ಜವಾಬ್ದಾರಿವಹಿಸಿಕೊಳ್ಳುವಂತೆ ಹೇಳಿದ್ದಾರಂತೆ. ಸದರಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯು ಜನೆವರಿ 5 ರಂದು ಶಿವಮೊಗ್ಗನಲ್ಲಿ ನಡೆಯಲಿದ್ದು ಈ ಸಭೆಯಲ್ಲಿ ಮೋರ್ಚಾದ ಮುಂದಿನ ಕಾರ್ಯಕ್ರಮಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಮತ್ತು ಸಭೆಯಲ್ಲಿ ಕಟೀಲ್ ಹಾಗೂ ರಾಜ್ಯ ಭಾರತೀಯ ಜನತಾ ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ ಸಹ ಭಾಗವಹಿಸಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ರಾಜ್ಯ ವಿಧಾನ ಪರಿಷತ್ ಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆ ಬಗ್ಗೆ ಕೇಳಿದ ಪ್ರಶ್ನೆಗೆ ಈಶ್ವರಪ್ಪ ಉತ್ತರಿಸಲು ತಡವರಿಸಿದರು. ಸೋತಿರುವುದನ್ನು ಮಾತ್ರ ಉಲ್ಲೇಖಿಸಿ ಕೇಳುವುದು ಯಾಕೆ, ಗೆದ್ದ ಸ್ಥಾನಗಳ ಬಗ್ಗೆ ಯಾಕೆ ಕೇಳುವುದಿಲ್ಲ ಎಂದು ಮಾಧ್ಯಮದವರಿಗೆ ಮರುಸವಾಲು ಹಾಕಿದರು.

ಇದನ್ನೂ ಓದಿ:   Virat Kohli: ನಮ್ಮ ರಾಕ್ ಇಸ್ ಬ್ಯಾಕ್: ಬುಮ್ರಾರನ್ನು ಹುರಿದುಂಬಿಸುತ್ತಿರುವ ಕೊಹ್ಲಿಯ ವಿಡಿಯೋ ವೈರಲ್

Published on: Dec 29, 2021 08:17 PM