AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ನಮ್ಮ ರಾಕ್ ಇಸ್ ಬ್ಯಾಕ್: ಬುಮ್ರಾರನ್ನು ಹುರಿದುಂಬಿಸುತ್ತಿರುವ ಕೊಹ್ಲಿಯ ವಿಡಿಯೋ ವೈರಲ್

India vs South Africa: ಮೈದಾನಕ್ಕೆ ಮರಳಿದ ಬುಮ್ರಾ ಕೇಶವ್ ಮಹಾರಾಜ್ ವಿಕೆಟ್ ಉರುಳಿಸಿದರು. ಇದಕ್ಕೂ ಮುನ್ನ ಬುಮ್ರಾ ಸೌತ್ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಅವರ ವಿಕೆಟ್ ಕೂಡ ಪಡೆದಿದ್ದರು.

Virat Kohli: ನಮ್ಮ ರಾಕ್ ಇಸ್ ಬ್ಯಾಕ್: ಬುಮ್ರಾರನ್ನು ಹುರಿದುಂಬಿಸುತ್ತಿರುವ ಕೊಹ್ಲಿಯ ವಿಡಿಯೋ ವೈರಲ್
Virat Kohli-Jasprit Bumrah
TV9 Web
| Edited By: |

Updated on: Dec 29, 2021 | 4:14 PM

Share

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೆಂಚುರಿಯನ್ ಟೆಸ್ಟ್‌ನ ಮೂರನೇ ದಿನ, ಜಸ್ಪ್ರೀತ್ ಬುಮ್ರಾ ಅರ್ಧದಲ್ಲೇ ಮೈದಾನ ತೊರೆದಿದ್ದರು. ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್‌ನ 11 ನೇ ಓವರ್‌ನಲ್ಲಿ ಬಾಲ್ ಎಸೆಯುವ ಸಂದರ್ಭದಲ್ಲಿ ಬುಮ್ರಾ ಅವರ ಪಾದವು ತಿರುಚಿಕೊಂಡಿತು. ಇದರಿಂದ ನೋವಿಗೆ ತುತ್ತಾದ ಬುಮ್ರಾ ಮೈದಾನ ತೊರೆದಿದ್ದರು. ಆ ಬಳಿಕ ತಂಡದ ಫಿಸಿಯೋ ನಿತಿನ್ ಪಟೇಲ್ ಬುಮ್ರಾಗೆ ತಕ್ಷಣ ಚಿಕಿತ್ಸೆ ನೀಡಿದರು. ಕಾಲಿನ ಪಾದವು ಟ್ವಿಸ್ಟ್ ಆಗಿದ್ದ ಕಾರಣ ಬುಮ್ರಾ ಮತ್ತೆ ಮೈದಾನಕ್ಕೆ ಇಳಿಯುವುದು ಅನುಮಾನ ಎನ್ನಲಾಗಿತ್ತು. ಆದರೆ 48 ಓವರ್‌ಗಳ ನಂತರ ಬುಮ್ರಾ ಮೈದಾನಕ್ಕೆ ಮರಳಿದರು.

ಜಸ್​ಪ್ರೀತ್ ಬುಮ್ರಾ ಅವರ ರಿ ಎಂಟ್ರಿಯಿಂದ ಅತೀ ಹೆಚ್ಚು ಖುಷಿಯಾಗಿದ್ದು ನಾಯಕ ವಿರಾಟ್ ಕೊಹ್ಲಿ ಅವರಿಗೆ. ಪ್ರಮುಖ ಬೌಲರ್​ನ ಕಂಬ್ಯಾಕ್ ಅನ್ನು ಕೊಹ್ಲಿ ವಿಶೇಷ ರೀತಿಯಲ್ಲಿ ಸ್ವಾಗತಿಸಿದರು. ಫೈನಲಿ ದಿ ರಾಕ್ ಹ್ಯಾಸ್ ಕಮ್ ಬ್ಯಾಕ್ ಎನ್ನುವ ಮೂಲಕ ಬುಮ್ರಾರನ್ನು ಕೊಹ್ಲಿ ಹುರಿದುಂಬಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಕೊಹ್ಲಿಯ ನಡೆಯ ಬಗ್ಗೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ವಿರಾಟ್ ಕೊಹ್ಲಿ ಬುಮ್ರಾರನ್ನು ರಾಕ್ ಇಸ್ ಬ್ಯಾಕ್ ಎಂದಿರುವ ಕಾರಣ ಇತ್ತ ಸೋಷಿಯಲ್ ಮೀಡಿಯಾದಲ್ಲಿ ರಾಕ್ ರಾರಾಜಿಸುತ್ತಿದ್ದಾರೆ. ಏಕೆಂದರೆ WWE ಸೂಪರ್‌ಸ್ಟಾರ್ ‘ದಿ ರಾಕ್’ 8 ವರ್ಷಗಳ ಸುದೀರ್ಘ ಬ್ರೇಕ್ ನಂತರ 2011 ರಲ್ಲಿ ರಿಂಗ್‌ಗೆ ಮರಳಿದಾಗ ದಿ ರಾಕ್ ಹ್ಯಾಸ್ ಕಮ್ ಬ್ಯಾಕ್ ಡೈಲಾಗ್ ವೈರಲ್ ಆಗಿತ್ತು. ಇದೀಗ ಕ್ರಿಕೆಟ್ ಅಂಗಳದ ಈ ಘಟನೆಯಿಂದ ದಿ ರಾಕ್ ಸೋಷಿಯಲ್ ಮೀಡಿಯಾದಲ್ಲಿ ರಾಕಿಂಗ್ ಮಾಡುತ್ತಿದ್ದಾರೆ.

ಇನ್ನು ಮೈದಾನಕ್ಕೆ ಮರಳಿದ ಬುಮ್ರಾ ಕೇಶವ್ ಮಹಾರಾಜ್ ವಿಕೆಟ್ ಉರುಳಿಸಿದರು. ಇದಕ್ಕೂ ಮುನ್ನ ಬುಮ್ರಾ ಸೌತ್ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಅವರ ವಿಕೆಟ್ ಕೂಡ ಪಡೆದಿದ್ದರು. ಇದೀಗ ಮೊದಲ ಇನಿಂಗ್ಸ್​ನ 130 ರನ್​ಗಳ ಮುನ್ನಡೆಯೊಂದಿಗೆ ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದ್ದು, ಇನ್ನು ಕೇವಲ 1 ದಿನದಾಟ ಮಾತ್ರ ಉಳಿದಿದೆ. ಹೀಗಾಗಿ ಈ ಪಂದ್ಯದ ಫಲಿತಾಂಶ ಏನಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.

ಇದನ್ನೂ ಓದಿ:  ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(Virat Kohli’s comment on Jasprit Bumrah’s return makes fans chuckle)