‘ಪಾರ್ಟ್ 2 ನೋಡಬೇಕು, ಆಗ ಪೂರ್ತಿ ಗೊತ್ತಾಗತ್ತೆ’: ‘ಅವತಾರ ಪುರುಷ’ ನೋಡಿದ ಫ್ಯಾನ್ಸ್ ರಿಯಾಕ್ಷನ್
ಮೊದಲ ದಿನ ‘ಅವತಾರ ಪುರುಷ’ ಸಿನಿಮಾ ನೋಡಿದ ಪ್ರೇಕ್ಷಕರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ..
ನಿರ್ದೇಶಕ ಸಿಂಪಲ್ ಸುನಿ ಅವರು ‘ಅವತಾರ ಪುರುಷ’ (Avatara Purusha Movie) ಸಿನಿಮಾದಲ್ಲಿ ಹೊಸ ಪ್ರಯತ್ನ ಮಾಡಿದ್ದಾರೆ. ಕಾಮಿಡಿ ಮತ್ತು ರೊಮ್ಯಾಂಟಿಕ್ ಸಿನಿಮಾಗಳಿಂದ ಈ ಮೊದಲು ಫೇಮಸ್ ಆಗಿದ್ದ ಅವರು ಈಗ ಬೇರೆ ಶೈಲಿಯಲ್ಲಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ನಟ ಶರಣ್ (Sharan) ಅವರು ಕೂಡ ಅಭಿಮಾನಿಗಳನ್ನು ಎಂದಿನಂತೆ ನಗಿಸುವ ಪ್ರಯತ್ನ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿರುವ ಈ ಸಿನಿಮಾ ಎರಡು ಪಾರ್ಟ್ನಲ್ಲಿ ಮೂಡಿಬಂದಿದ್ದು ಮೊದಲ ಪಾರ್ಟ್ ಈಗ ಬಿಡುಗಡೆ ಆಗಿದೆ. ಎರಡನೇ ಪಾರ್ಟ್ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: May 06, 2022 03:33 PM