ಶಿಗ್ಗಾಂವಿ: ಸಿಎಂ ಸಿದ್ದರಾಮಯ್ಯ ಕುಳಿತಿದ್ದಾಗ ಕಿತ್ತುಬಂದ ಪೆಂಡಾಲ್, ಆಮೇಲೇನಾಯ್ತು ನೋಡಿ

|

Updated on: Nov 04, 2024 | 2:43 PM

ಶಿಗ್ಗಾಂವಿ ಉಪಚುನಾವಣೆ ಪ್ರಚಾರಕ್ಕೆಂದು ಹಾವೇರಿ ಜಿಲ್ಲೆಗೆ ತೆರಳಿರುವ ಸಿಎಂ ಸಿದ್ದರಾಮಯ್ಯ ಸೋಮವಾರ ಹುಲಗೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು. ಇದೇ ವೇಳೆ ಅವರು ಕುಳಿತಿದ್ದಲ್ಲಿ ಹಾಕಲಾಗಿದ್ದ ಪೆಂಡಾಲ್ ಕಿತ್ತುಬಂದು ಅವಾಂತರ ಸೃಷ್ಟಿಯಾಯಿತು. ಆಮೇಲೇನಾಯ್ತು? ಸಿದ್ದರಾಮಯ್ಯ ಬಚಾವಗಿದ್ಹೇಗೆ? ಇಲ್ಲಿದೆ ನೋಡಿ ವಿಡಿಯೋ.

ಹಾವೇರಿ, ನವೆಂಬರ್ 4: ಶಿಗ್ಗಾಂವಿ ಉಪಚುನಾವಣೆ ಕಣ ರಂಗೇರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಶಿಗ್ಗಾಂವಿ ತಾಲೂಕಿನ ಹುಲಗೂರು ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದರು. ಇದೇ ವೇಳೆ, ಸಿಎಂ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಪೆಂಡಾಲ್ ಕಿತ್ತುಹೋಯಿತು. ಸಿಎಂ ಉಪಸ್ಥಿತರಿದ್ದ ವೇದಿಕೆ ಮುಂಭಾಗದಲ್ಲಿ ಪೆಂಡಾಲ್ ಹಾರಿತು. ತಕ್ಷಣ ಸ್ಥಳದಲ್ಲಿದ್ದ ಸಿಬ್ಬಂದಿ ಪೆಂಡಾಲ್​ ಅನ್ನು ಹಿಡಿದುಕೊಂಡು ನಿಂತು ಹೆಚ್ಚಿನ ಸಮಸ್ಯೆಯಾಗದಂತೆ ತಡೆದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:40 pm, Mon, 4 November 24

Follow us on