ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಗ್ರಾಮಸ್ಥರ ಆತಂಕ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಆತಂಕ ಮಾತ್ರ ಕಡಿಮೆಯಾಗಿಲ್ಲ. ಕಳೆದ ವರ್ಷ ಜುಲೈ 16 ರಂದು ಗುಡ್ಡ ಕುಸಿದು ಪಕ್ಕದ ಗಂಗಾವಳಿ ನದಿಯಲ್ಲಿ ದ್ವೀಪ ಸೃಷ್ಟಿ ಆಗಿತ್ತು. ಇದೀಗ ನದಿಯಲ್ಲಿ ಸೃಷ್ಟಿ ಆಗಿರುವ ಗುಡ್ಡದಿಂದ ನದಿ ಅಕ್ಕ ಪಕ್ಕದ ಗ್ರಾಮದ ಜನರಿಗೆ ಆತಂಕ ಶುರುವಾಗಿದೆ. ಕಳೆದ ಒಂದು ವರ್ಷದಿಂದ ಸ್ಥಳಿಯರ ಒತ್ತಾಯಕ್ಕೆ ಮಣಿದ ಜಿಲ್ಲಾಡಳಿತ ಸುಮಾರು 1.5 ಕೋಟಿ ವೆಚ್ಚದಲ್ಲಿ ನದಿಯಲ್ಲಿನ ಮಣ್ಣು ತೆರವು ಮಾಡಲು ಟೆಂಡರ್ ಕರೆದಿದೆ. ಆದ್ರೆ, ಜಿಲ್ಲಾಡಳಿತ ಎರಡು ಬಾರಿ ಟೆಂಡರ್ ಕರೆದ್ರು ಪ್ರಕ್ರಿಯೆಯಲ್ಲಿ ಭಾಗವಹಿಸದ ಗುತ್ತಿಗೆದಾರರು. ಇದೀಗ ಮೂರನೇ ಬಾರಿ ಮತ್ತೆ ಟೆಂಡರ್ ಕರೆಯಲಾಗಿದೆ.
ಕಾರವಾರ, (ಜುಲೈ 24): ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಆತಂಕ ಮಾತ್ರ ಕಡಿಮೆಯಾಗಿಲ್ಲ. ಕಳೆದ ವರ್ಷ ಜುಲೈ 16 ರಂದು ಗುಡ್ಡ ಕುಸಿದು ಪಕ್ಕದ ಗಂಗಾವಳಿ ನದಿಯಲ್ಲಿ ದ್ವೀಪ ಸೃಷ್ಟಿ ಆಗಿತ್ತು. ಇದೀಗ ನದಿಯಲ್ಲಿ ಸೃಷ್ಟಿ ಆಗಿರುವ ಗುಡ್ಡದಿಂದ ನದಿ ಅಕ್ಕ ಪಕ್ಕದ ಗ್ರಾಮದ ಜನರಿಗೆ ಆತಂಕ ಶುರುವಾಗಿದೆ. ಕಳೆದ ಒಂದು ವರ್ಷದಿಂದ ಸ್ಥಳಿಯರ ಒತ್ತಾಯಕ್ಕೆ ಮಣಿದ ಜಿಲ್ಲಾಡಳಿತ ಸುಮಾರು 1.5 ಕೋಟಿ ವೆಚ್ಚದಲ್ಲಿ ನದಿಯಲ್ಲಿನ ಮಣ್ಣು ತೆರವು ಮಾಡಲು ಟೆಂಡರ್ ಕರೆದಿದೆ. ಆದ್ರೆ, ಜಿಲ್ಲಾಡಳಿತ ಎರಡು ಬಾರಿ ಟೆಂಡರ್ ಕರೆದ್ರು ಪ್ರಕ್ರಿಯೆಯಲ್ಲಿ ಭಾಗವಹಿಸದ ಗುತ್ತಿಗೆದಾರರು. ಇದೀಗ ಮೂರನೇ ಬಾರಿ ಮತ್ತೆ ಟೆಂಡರ್ ಕರೆಯಲಾಗಿದೆ. ಮತ್ತೊಂದೆಡೆ ಸದ್ಯ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅಬ್ಬರದ ಮಳೆ ಸುರಿಯುತ್ತಿರುವ ಹಿನ್ನೆಲೆ ಶಿರೂರು ಹಾಗೂ ಉಳುವರೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.