Home Minister Movie: ಉಪ್ಪಿ ಅಭಿನಯದ ‘ಹೋಮ್ ಮಿನಿಸ್ಟರ್’ ನೋಡಿ ಶಿವಣ್ಣ ಹೇಳಿದ್ದೇನು? ಇಲ್ಲಿದೆ ನೋಡಿ

| Updated By: shivaprasad.hs

Updated on: Apr 03, 2022 | 8:08 PM

Shiva Rajkumar | Upendra: ಉಪೇಂದ್ರ ಹಾಗೂ ಜ್ಯೋತಿಕಾ ನಟನೆಯ ‘ಹೋಮ್ ಮಿನಿಸ್ಟರ್’ ಶುಕ್ರವಾರ ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಇದೀಗ ಚಿತ್ರದ ಸೆಲೆಬ್ರಿಟಿ ಶೋ ನಡೆದಿದ್ದು, ಶಿವರಾಜ್​ಕುಮಾರ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಾರೆಯರು ಭಾಗವಹಿಸಿ, ಚಿತ್ರ ವೀಕ್ಷಿಸಿದ್ದಾರೆ.

ಸ್ಯಾಂಡಲ್​ವುಡ್​ನ ನಟ ರಿಯಲ್​ಸ್ಟಾರ್ ಉಪೇಂದ್ರ (Real Star Upendra) ಹಾಗೂ ವೇದಿಕಾ (Vedika) ಅಭಿನಯಿಸಿರುವ ‘ಹೋಮ್​ ಮಿನಿಸ್ಟರ್’ (Home Minister Movie) ರಿಲೀಸ್ ಆಗಿದೆ. ಈ ಸಿನಿಮಾದ ಸೆಲೆಬ್ರಿಟಿ ಶೋ ನಡೆದಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್, ರಮೇಶ್ ಅರವಿಂದ್, ಅಜಯ್ ರಾವ್, ಅನುಪ್ರಭಾಕರ್ ಮೊದಲಾದವರು ಉಪಸ್ಥಿತರಿದ್ದು ಚಿತ್ರ ವೀಕ್ಷಿಸಿದರು. ನಂತರ ಮಾತನಾಡಿದ ಶಿವರಾಜ್​ಕುಮಾರ್ ಚಿತ್ರವನ್ನು ಹೊಗಳಿದ್ದಾರೆ. ‘‘ಉಪೇಂದ್ರ ಅವರ ಇಮೇಜ್​ಗಳಿಂದ ಭಿನ್ನವಾದ ಚಿತ್ರ ಇದು. ‘ಹೋಮ್ ಮಿನಿಸ್ಟರ್’ ಮನರಂಜನೆಯಿಂದ ಕೂಡಿದ್ದು, ಗಂಡ- ಹೆಂಡತಿ ಹೇಗಿರಬೇಕು ಎನ್ನುವುದನ್ನು ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ. ವೇದಿಕಾ ಗ್ಲಾಮರಸ್ ಹೊರತಾಗಿ ಕಾಣಿಸಿಕೊಂಡಿದ್ದಾರೆ. ಸಣ್ಣ ಸಣ್ಣ ಪಾತ್ರಗಳೂ ಬಹಳ ಅಚ್ಚುಕಟ್ಟಾಗಿವೆ. ಒಟ್ಟಾರೆ ನಾನು ನಕ್ಕು ನಕ್ಕು ಸಿನಿಮಾ ನೋಡಿದ್ದೇನೆ. ಇದೊಂದು ಮಸ್ಟ್ ವಾಚ್ ಚಿತ್ರ’’ ಎಂದಿದ್ದಾರೆ ಶಿವಣ್ಣ.

‘ಒಂದು ಕುಟುಂಬವೆಂದಾಗ ಅದರಲ್ಲಿ ಒಬ್ಬರು ಬಿಟ್ಟುಕೊಡಬೇಕು- ಒಬ್ಬರು ತೆಗೆದುಕೊಳ್ಳುವಂತಹ ಸಂಬಂಧ ಇರಬೇಕು. ಅದನ್ನು ಬಹಳ ಚೆನ್ನಾಗಿ ಸಿನಿಮಾದಲ್ಲಿ ಹೇಳಲಾಗಿದೆ’’ ಎಂದು ಹೇಳಿದ್ದಾರೆ ಶಿವಣ್ಣ.

‘ಹೋಮ್ ಮಿನಿಸ್ಟರ್’ ಚಿತ್ರವನ್ನು ಸುಜಯ್ ಕೆ ಶ್ರೀಹರಿ ನಿರ್ದೇಶಿಸಿದ್ದಾರೆ. ಸಾಧು ಕೋಕಿಲ, ತಾನ್ಯಾ ಹೋಪ್, ಅವಿನಾಶ್ ಮೊದಲಾದ ತಾರಾಗಣ ಚಿತ್ರದಲ್ಲಿದೆ.

ಇದನ್ನೂ ಓದಿ: ವೇದಿಕಾಗೆ ಯಾವ ರೀತಿಯ ಗಂಡ ಬೇಕು? ಮುಕ್ತವಾಗಿ ಹೇಳಿಕೊಂಡ ‘ಹೋಮ್​ ಮಿನಿಸ್ಟರ್​’ ನಾಯಕಿ

ಉಪ್ಪಿ ಅಭಿನಯದ ‘ಹೋಮ್ ಮಿನಿಸ್ಟರ್’ ಸಿನಿಮಾ ರಿಲೀಸ್, ಕುಣಿದು ಕುಪ್ಪಳಿಸಿದ ಅಭಿಮಾನಿಗಳು!

Published on: Apr 03, 2022 08:06 PM