ಗದೆ ಹಿಡಿದು ಭೀಮ ಪಾತ್ರಧಾರಿಯಾದ ಶಿವಲಿಂಗೇಗೌಡ: ಅಬಕಾರಿ ಸಚಿವರ ಡೈಲಾಗ್​​ ಕೇಳಿ ಪ್ರೇಕ್ಷಕರು ಫಿದಾ

Edited By:

Updated on: Sep 06, 2026 | 8:44 AM

ಹಾಸನದ ಅರಸೀಕೆರೆ ತಾಲೂಕಿನ ಚಿಂದೇನಹಳ್ಳಿಯಲ್ಲಿ ನಡೆದ ಕುರುಕ್ಷೇತ್ರ ಪೌರಾಣಿಕ ನಾಟಕದಲ್ಲಿ ಅಬಕಾರಿ ಸಚಿವ ಶಿವಲಿಂಗೇಗೌಡ ಅವರು ಗದೆ ಹಿಡಿದು ಭೀಮನ ಪಾತ್ರದ ಸಂಭಾಷಣೆ ಹೇಳುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ನಾಟಕದ ಡೈಲಾಗ್ ಹೇಳುವಂತೆ ಸಚಿವರನ್ನು ಗ್ರಾಮಸ್ಥರು ಒತ್ತಾಯಿಸಿದ್ದು, ಗ್ರಾಮಸ್ಥರ ಒತ್ತಾಯದ ಮೇರೆಗೆ ಗದೆ ಹಿಡಿದು ಕುರುಕ್ಷೇತ್ರ ನಾಟಕದ ಸಂಭಾಷಣೆಯನ್ನು ಶಿವಲಿಂಗೇಗೌಡರು ಹೇಳಿದ್ದಾರೆ.

ಹಾಸನ, ಸೆಪ್ಟೆಂಬರ್​​ 06: ಗದೆ ಹಿಡಿದು ಭೀಮನಾದ ಅಬಕಾರಿ ಸಚಿವ ಶಿವಲಿಂಗೇಗೌಡ ಅವರು ಪೌರಾಣಿಕ ನಾಟಕದ ಡೈಲಾಗ್ ಹೊಡೆದು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಪ್ರಜಾ ಸೇವೆ ಆಂದೋಲನ ಸಭೆ ಮುಗಿಸಿ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಚಿಂದೇನಹಳ್ಳಿ ಗಡಿಯಲ್ಲಿ ನಿನ್ನೆ ರಾತ್ರಿ ಆಯೋಜಿಸಿದ್ದ ಕುರುಕ್ಷೇತ್ರ ನಾಟಕ ನಡೆಯುತ್ತಿದ್ದ ಸ್ಥಳಕ್ಕೆ ಸಚಿವರು ಭೇಟಿ ನೀಡಿದ್ದರು. ಈ ವೇಳೆ ನಾಟಕದ ಡೈಲಾಗ್ ಹೇಳುವಂತೆ ಸಚಿವರನ್ನು ಗ್ರಾಮಸ್ಥರು ಒತ್ತಾಯಿಸಿದ್ದು, ಗ್ರಾಮಸ್ಥರ ಒತ್ತಾಯದ ಮೇರೆಗೆ ಗದೆ ಹಿಡಿದು ಕುರುಕ್ಷೇತ್ರ ನಾಟಕದ ಸಂಭಾಷಣೆಯನ್ನು ಶಿವಲಿಂಗೇಗೌಡರು ಹೇಳಿದ್ದಾರೆ. ಸಚಿವ ಮಾತಿಗೆ ಫಿದಾ ಆದ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಹೊಡೆದು ಸಂತಸಪಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Published on: Sep 06, 2026 08:41 AM
Loading...
Unable to load recommendations.
Follow Us
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More