ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಇರುಮುಡಿ ಹೊತ್ತು ಸಾಗಿದ ಶಿವಣ್ಣ ದಂಪತಿ

Edited By:

Updated on: Jan 14, 2026 | 4:41 PM

ನಟ ಶಿವರಾಜ್ ಕುಮಾರ್ ಅವರು ಅಯ್ಯಪ್ಪ ಸ್ವಾಮಿ ಭಕ್ತರು. ಈ ವರ್ಷ ಕೂಡ ಅವರು ಮಾಲೆ ಧರಿಸಿ ಇರುಮುಡಿ ಹೊತ್ತಿದ್ದಾರೆ. ಅವರ ಜತೆ ಪತ್ನಿ ಗೀತಾ ಶಿವರಾಜ್ ಕುಮಾರ್ ಸಹ ಸಾಥ್ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಶ್ರೀಕ್ಷೇತ್ರ ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಅವರು ಇರುಮುಡಿ ಹೊತ್ತು ಸಾಗಿದ್ದಾರೆ.

ನಟ ಶಿವರಾಜ್​ಕುಮಾರ್ (Shivarajkumar) ಅವರು ಅಯ್ಯಪ್ಪ ಸ್ವಾಮಿಯ ಭಕ್ತರು. ಹಲವು ಬಾರಿ ಅವರು ಮಾಲೆ ಧರಿಸಿದ್ದರು. ಈ ವರ್ಷವೂ ಅವರು ಮಾಲೆ ಧರಿಸಿ ಇರುಮುಡಿ (Irumudi) ಹೊತ್ತಿದ್ದಾರೆ. ಅವರ ಜೊತೆ ಪತ್ನಿ ಗೀತಾ ಕೂಡ ಸಾಥ್ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಶ್ರೀಕ್ಷೇತ್ರ ಬೆಜ್ಜವಳ್ಳಿ ಅಯ್ಯಪ್ಪ ಸ್ವಾಮಿ (Bejjavalli Ayyappa Temple) ದೇವಾಲಯಕ್ಕೆ ಅವರು ಇರುಮುಡಿ ಹೊತ್ತು ಸಾಗಿದ್ದಾರೆ. ವಿಶ್ವ ಸಂತೋಷ ಭಾರತಿ ಗುರೂಜಿ ನೇತೃತ್ವದಲ್ಲಿ ಮೆರವಣಿಗೆ ಸಾಗಿದೆ. ಮಕರ ಸಂಕ್ರಮಣದ ಅಂಗವಾಗಿ ಅಯ್ಯಪ್ಪನ ಪೂಜೆಗೂ ಮುನ್ನ ಮೆರವಣಿಗೆ ಮಾಡಲಾಗಿದೆ. ವಿವಿಧ ಆಭರಣಗಳ ಸಮೇತ, ಉತ್ಸವ ಮೂರ್ತಿಯನ್ನ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತರಲಾಗಿದೆ. ಬೆಜ್ಜವಳ್ಳಿ ಅಯ್ಯಪ್ಪನ ಉತ್ಸವದ ಹಿನ್ನೆಲೆಯಲ್ಲಿ ಇಂದು (ಜನವರಿ 14) ಭಕ್ತರ ದಂಡು ನೆರೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.