‘ನಾವು ಎಲ್ಲವನ್ನು ಎದುರಿಸುತ್ತಾ ಸಾಗಬೇಕು’; ರಾಜ್ ಪುಣ್ಯಸ್ಮರಣೆ ದಿನ ಶಿವಣ್ಣ ಮಾತು
ಈ ನೊವಿನ ಜತೆಗೆ ನಾವು ಸಾಗಬೇಕಿದೆ. ಈ ಬಗ್ಗೆ ಶಿವರಾಜ್ಕುಮಾರ್ ಅವರು ಮಾತನಾಡಿದ್ದಾರೆ. ಈ ವೇಳೆ ಶಿವಣ್ಣ ಭಾವುಕರಾದರು.
ಇಂದಿಗೆ (ಏಪ್ರಿಲ್ 12) ರಾಜ್ಕುಮಾರ್ (Rajkumar) ನಿಧನ ಹೊಂದಿ 16 ವರ್ಷಗಳು ಉರುಳಿವೆ. ರಾಜ್ಕುಮಾರ್ ಅವರ ಸ್ಮಾರಕ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿದೆ. ಅಲ್ಲಿಗೆ, ಶಿವರಾಜ್ಕುಮಾರ್ (Shivarajkumar), ರಾಘವೇಂದ್ರ ರಾಜ್ಕುಮಾರ್, ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಆಗಮಿಸಿ ಪೂಜೆ ಸಲ್ಲಿಕೆ ಮಾಡಿದರು. ಪುನೀತ್ (Pumeeth) ಅವರ ಸಮಾಧಿ ರಾಜ್ಕುಮಾರ್ ಸ್ಮಾರಕದ ಸಮೀಪವೇ ಇದೆ. ಹೀಗಾಗಿ, ಅಲ್ಲಿಗೆ ಬಂದಾಗ ಪುನೀತ್ ನೆನಪು ಹೆಚ್ಚು ಕಾಡೋದು ಸಹಜ. ಆದರೆ, ಈ ನೊವಿನ ಜತೆಗೆ ನಾವು ಸಾಗಬೇಕಿದೆ. ಈ ಬಗ್ಗೆ ಶಿವರಾಜ್ಕುಮಾರ್ ಅವರು ಮಾತನಾಡಿದ್ದಾರೆ. ಈ ವೇಳೆ ಶಿವಣ್ಣ ಭಾವುಕರಾದರು. ಇಂದು ಅಭಿಮಾನಿಗಳು ಸಹ ರಾಜ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.
‘ಗಂಧದ ಗುಡಿ ಬಗ್ಗೆ ನೀವು ಟ್ವೀಟ್ ಮಾಡಬೇಕು’; ಪುನೀತ್ ಹೇಳಿದ ಮಾತು ನೆನಪಿಸಿಕೊಂಡ ಯಶ್
Loading...
Unable to load recommendations.
Follow Us
