ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ

|

Updated on: Mar 30, 2025 | 10:38 PM

ಉಪೇಂದ್ರ ಮತ್ತು ಶಿವರಾಜ್​ಕುಮಾರ್ ಅವರದ್ದು ಹಲವು ವರ್ಷಗಳ ಸ್ನೇಹ. ಉಪೇಂದ್ರ ಹೇಗೆ ಊಟ ಮಾಡುತ್ತಿದ್ದರು ಎಂಬದನ್ನು ಈಗ ಶಿವಣ್ಣ ಹೇಳಿದ್ದಾರೆ. ‘45’ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಅವರ ಮಾತು ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ.

‘45’ ಸಿನಿಮಾದ (45 Movie) ಟೀಸರ್ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್, ಉಪೇಂದ್ರ (Upendra), ರಾಜ್ ಬಿ. ಶೆಟ್ಟಿ ಅವರು ನಟಿಸಿದ್ದಾರೆ. ಟೀಸರ್ ಬಿಡುಗಡೆ ವೇಳೆ ಶಿವಣ್ಣ ಒಂದು ಘಟನೆ ನೆನಪಿಸಿಕೊಂಡಿದ್ದಾರೆ. ‘ಉಪೇಂದ್ರ ಸ್ಟೈಲ್ ತುಂಬ ಭಿನ್ನ. ಅವರು ಊಟದ ರೀತಿ ಮಾಡಲ್ಲ. ಅನ್ನ, ಸಾಂಬಾರ್, ರಸಂ, ಮೊಸರು ಎಲ್ಲನ್ನೂ ಒಟ್ಟಿಗೆ ಕಲಿಸಿಕೊಂಡು ಪಾಯಸದ ರೀತಿ ಕುಡಿಯುತ್ತಿದ್ದರು. ನಾನೇ ಫಾಸ್ಟ್ ಎಂದರೆ ಉಪೇಂದ್ರ ನನಗಿಂತ ಫಾಸ್ಟ್’ ಎಂದು ಶಿವಣ್ಣ (Shivarajkumar) ಹೇಳಿದ್ದಾರೆ.

​ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.