‘ನಾನು ಸತ್ತಿಲ್ಲ ಬದುಕಿದ್ದೀನಿ!’: ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!

Edited By:

Updated on: Aug 17, 2026 | 10:18 AM

ಬದುಕಿರುವ ವ್ಯಕ್ತಿಯನ್ನೇ ಮೃತಪಟ್ಟಿದ್ದಾರೆಂದು ನಕಲಿ ಡೆತ್ ಸರ್ಟಿಫಿಕೇಟ್ ಸೃಷ್ಟಿಸಿ, ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಕಬಳಿಸಿರುವ ಘಟನೆ ಮಾನ್ವಿಯಲ್ಲಿ ಬೆಳಕಿಗೆ ಬಂದಿದೆ. ಬಹ್ರೇನ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಮೊಹಮದ್ ಶರ್ಫುದ್ದಿನ್ ಕಷ್ಟಪಟ್ಟು 6 ಮನೆ ಹಾಗೂ 2 ಅಂಗಡಿಗಳನ್ನು ಖರೀದಿಸಿದ್ದರು. ಹೆಂಡತಿ ರಸೂಲ್ ಬೀ ನಿಧನದ ಬಳಿಕ, ಕರೀಷ್ಮಾ ಎಂಬುವವರು ಶರ್ಫುದ್ದಿನ್ ಅವರ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಆಸ್ತಿ ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ರಾಯಚೂರು, ಆಗಸ್ಟ್ 17: ಬದುಕಿರುವ ವ್ಯಕ್ತಿಯನ್ನೇ ಮೃತಪಟ್ಟಿದ್ದಾರೆಂದು ನಕಲಿ ಡೆತ್ ಸರ್ಟಿಫಿಕೇಟ್ ಸೃಷ್ಟಿಸಿ, ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಕಬಳಿಸಿರುವ ಘಟನೆ ಮಾನ್ವಿಯಲ್ಲಿ ಬೆಳಕಿಗೆ ಬಂದಿದೆ. ಬಹ್ರೇನ್‌ನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಮೊಹಮದ್ ಶರ್ಫುದ್ದಿನ್ ಕಷ್ಟಪಟ್ಟು 6 ಮನೆ ಹಾಗೂ 2 ಅಂಗಡಿಗಳನ್ನು ಖರೀದಿಸಿದ್ದರು. ಹೆಂಡತಿ ರಸೂಲ್ ಬೀ ನಿಧನದ ಬಳಿಕ, ಕರೀಷ್ಮಾ ಎಂಬುವವರು ಶರ್ಫುದ್ದಿನ್ ಅವರ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಆಸ್ತಿ ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

“ಸ್ವಾಮಿ ನಾನು ಸತ್ತಿಲ್ಲ, ಬದುಕಿದ್ದೇನೆ. ನನ್ನ ಆಸ್ತಿ ಮರಳಿಸಿಕೊಡಿ” ಎಂದು ವೃದ್ಧ ಶರ್ಫುದ್ದಿನ್ ಜಿಲ್ಲಾಧಿಕಾರಿ ಕಚೇರಿ ಹಾಗೂ ಪುರಸಭೆಗೆ ಅಲೆದಾಡುತ್ತಿದ್ದು, ಹೆಂಡತಿಯೂ ಇಲ್ಲದೆ, ಆಸ್ತಿಯೂ ಸಿಗದೆ ಭಿಕ್ಷುಕನಂತಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಭೀಮೇಶ್​​ ಪೂಜಾರ್

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More