ಬಿಸಿ ಬಿಸಿ ಇಡ್ಲಿಯಲ್ಲಿ ಜಿರಳೆ ಪತ್ತೆ; ಹೋಟೆಲ್ ಗ್ರಾಹಕರ ಆಕ್ರೋಶ
ತೆಲಂಗಾಣದ ಜಗಿತ್ಯದ 2 ಹೋಟೆಲ್‌ಗಳಲ್ಲಿ ಇತ್ತೀಚೆಗೆ ನಡೆದ ಘಟನೆಗಳು ಆಹಾರದ ನೈರ್ಮಲ್ಯದ ಬಗ್ಗೆ ಗಂಭೀರ ಆತಂಕವನ್ನು ಉಂಟುಮಾಡಿದೆ. ಟಿಫಿನ್ ಸೆಂಟರ್ನಲ್ಲಿ ನೀಡಲಾದ ಇಡ್ಲಿಯಲ್ಲಿ ಜಿರಳೆ ಕಾಣಿಸಿಕೊಂಡು ಗ್ರಾಹಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಹೋಟೆಲ್ ಮಾಲೀಕರ ನಿರ್ಲಕ್ಷ್ಯಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್: ಕೆಲವು ಹೋಟೆಲ್ಗಳು ಗ್ರಾಹಕರಿಗೆ ನೀಡಲಾಗುವ ಆಹಾರದ ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸುತ್ತಿಲ್ಲ ಎಂಬ ಆತಂಕ ಎದುರಾಗಿದೆ. ಕೆಲವು ಹೋಟೆಲ್ಗಳು ಕ್ರಿಮಿಕೀಟಗಳ ಸಮೇತ ಊಟ ಬಡಿಸಿ ಜನರಲ್ಲಿ ಭಯ ಹುಟ್ಟಿಸುತ್ತಿವೆ. ತೆಲಂಗಾಣದ ಜಗಿತ್ಯಾದ ಜಿಲ್ಲಾ ಕೇಂದ್ರದ ಟಿಫಿನ್ ಸೆಂಟರ್ನಲ್ಲಿ ಇಡ್ಲಿಯಲ್ಲಿ ಜಿರಳೆ ಕಾಣಿಸಿಕೊಂಡು ಸಂಚಲನ ಮೂಡಿಸಿದೆ. ಗ್ರಾಹಕ ಇಡ್ಲಿಯನ್ನು ತಿನ್ನುವ ಮೊದಲೇ ಜಿರಳೆಯನ್ನು ಕಂಡು ಗಲಾಟೆ ಮಾಡಿದ್ದಾನೆ. ಟಿಫಿನ್ ಸೆಂಟರ್ ಮಾಲೀಕರು ಆ ಇಡ್ಲಿಯನ್ನು ಕಸಕ್ಕೆ ಎಸೆದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos