ಹಾಸನದಲ್ಲಿ ಶ್ರೇಯಸ್ ಪಟೇಲ್ ಮತ್ತು ತುಮಕೂರುನಲ್ಲಿ ಮುದ್ದಹನುಮೇಗೌಡ ಗೆಲ್ಲುವ ಉತ್ತಮ ಚಾನ್ಸ್ ಇದೆ: ಕೆಎನ್ ರಾಜಣ್ಣ

|

Updated on: Mar 09, 2024 | 3:50 PM

ಹಾಸನ ಕ್ಷೇತ್ರದಲ್ಲಿ ಪುಟ್ಟಸ್ವಾಮಿಗೌಡ ಮತ್ತು ಹೆಚ್ ಡಿ ದೇವೇಗೌಡರ ನಡೆದ ಚುನಾವಣಾ ಹಣಾಹಣಿ ಎಲ್ಲರಿಗೂ ಗೊತ್ತು. ಪುಟ್ಟಸ್ವಾಮಿಗೌಡರು ಎರಡು ಬಾರಿ ದೇವೇಗೌಡರನ್ನು ಸೋಲಿಸಿರುವುದು ಸಹ ನಿಜ. ಕರ್ನಾಟಕ ಸರ್ಕಾರ ಘೋಷಿಸಿರುವ ಕಾರ್ಯಕ್ರಮಗಳು ಶ್ರೇಯಸ್ ಗೆಲುವಿಗೆ ಕಾರಣವಾಗಲಿವೆ ಎಂದು ರಾಜಣ್ಣ ಹೇಳಿದರು.

ತುಮಕೂರು: ಲೋಕಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ನಿನ್ನೆ ಬಿಡುಗಡೆ ಮಾಡಿದ್ದು ಅದರಲ್ಲಿ ತುಮಕೂರು ಮತ್ತು ಹಾಸನ ಸೇರಿದಂತೆ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಸೇರಿದೆ. ತುಮಕೂರು ಕ್ಷೇತ್ರದ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡ (SP Muddahanumegowda) ಮತ್ತು ಹಾಸನ ಶ್ರೇಯಸ್ ಎಂ ಪಟೇಲ್ (Shreyas M Patel) ಗೆಲ್ಲುವ ಉತ್ತಮ ಅವಕಾಶಗಳಿವೆ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿದರು (KN Rajanna). ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರಾಜಣ್ಣ, ಹಾಸನ ಭಾಗದಲ್ಲಿ ಜನಪ್ರಿಯ ನಾಯಕರಾಗಿದ್ದ ಜಿ ಪುಟ್ಟಸ್ವಾಮಿಗೌಡ ಅವರ ಮೊಮ್ಮಗನಾಗಿರುವ ಶ್ರೇಯಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 3,000 ವೋಟುಗಳ ಅಂತರದಿಂದ ಸೋತಿದ್ದರು, ಮತದಾರರಲ್ಲಿ ಅವರ ಬಗ್ಗೆ ಸಹಾನುಭೂತಿ ಇದೆ. ಹಾಸನ ಕ್ಷೇತ್ರದಲ್ಲಿ ಪುಟ್ಟಸ್ವಾಮಿಗೌಡ ಮತ್ತು ಹೆಚ್ ಡಿ ದೇವೇಗೌಡರ ನಡೆದ ಚುನಾವಣಾ ಹಣಾಹಣಿ ಎಲ್ಲರಿಗೂ ಗೊತ್ತು.

ಪುಟ್ಟಸ್ವಾಮಿಗೌಡರು ಎರಡು ಬಾರಿ ದೇವೇಗೌಡರನ್ನು ಸೋಲಿಸಿರುವುದು ಸಹ ನಿಜ. ಕರ್ನಾಟಕ ಸರ್ಕಾರ ಘೋಷಿಸಿರುವ ಕಾರ್ಯಕ್ರಮಗಳು ಶ್ರೇಯಸ್ ಗೆಲುವಿಗೆ ಕಾರಣವಾಗಲಿವೆ ಎಂದು ರಾಜಣ್ಣ ಹೇಳಿದರು. ಟಿಕೆಟ್ ಘೋಷಣೆಯಾದಾಗ ಟಿಕೆಟ್ ಆಕಾಂಕ್ಷಿಗಳಾಗಿದ್ದವರಿಗೆ ಅಸಮಾಧಾನ ಉಂಟಾಗೋದು ಸಹಜ, ತುಮಕೂರುನಲ್ಲೂ ಕೆಲವರಿಗೆ ಆಗಿರಬಹುದು. ಆದರೆ ಒಬ್ಬರಿಗೆ ಟಿಕೆಟ್ ಸಿಕ್ಕ ಬಳಿಕ ಉಳಿದ ಆಕಾಂಕ್ಷಿಗಳು ಅಸಮಾಧಾನ ಮರೆತು ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ, ಹಾಗಾಗಿ, ಮುದ್ದಹನುಮೇಗೌಡರ ಗೆಲುವಿಗೆ ಯಾವುದೇ ಆಂಶ ಅಡ್ಡಿಯಾಗಲಾರದು ಎಂದು ರಾಜಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಹಾಸನದಲ್ಲಿ ಶ್ರೀಲಂಕಾ ಮಾದರಿ ಆನೆ ಧಾಮ: ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಭರವಸೆ

Published on: Mar 09, 2024 02:46 PM