AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಂಟ್​​ನಲ್ಲಿ ಗೊಂಬೆಗಳನ್ನಿಟ್ಟು ರಾಮ ರಾಮ ಎನ್ನುತ್ತಿದ್ದರು ಎಂಬ ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಕೆಎನ್​ ರಾಜಣ್ಣ

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಿದ್ದ ನಂತರ ಅಲ್ಲಿಗೆ ಹೋಗಿದ್ದೆ. ಟೆಂಟ್​​ನಲ್ಲಿ ಎರಡು ಗೊಂಬೆಗಳನ್ನಿಟ್ಟು ರಾಮ ರಾಮ ಎನ್ನುತ್ತಿದ್ದರು ಎಂದು ಸಚಿವ ಕೆನ್​ ರಾಜಣ್ಣ ಹೇಳಿದ್ದರು. ಇವರ ಈ ಹೇಳಿಕೆಗೆ ವ್ಯಾಪಕ ವಿರೋಧ ಮತ್ತು ಟೀಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಇದೀಗ ಕೆಎನ್​ ರಾಜಣ್ಣ ತಮ್ಮ ಹೇಳಿಕೆಯನ್ನು ಸಮರ್ಥಸಿಕೊಂಡಿದ್ದಾರೆ.

ಟೆಂಟ್​​ನಲ್ಲಿ ಗೊಂಬೆಗಳನ್ನಿಟ್ಟು ರಾಮ ರಾಮ ಎನ್ನುತ್ತಿದ್ದರು ಎಂಬ ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಕೆಎನ್​ ರಾಜಣ್ಣ
ಕೆನ್​ ರಾಜಣ್ಣ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ವಿವೇಕ ಬಿರಾದಾರ

Updated on: Jan 19, 2024 | 11:08 AM

ತುಮಕೂರು, ಜನವರಿ 19: ಅಯೋಧ್ಯೆಯಲ್ಲಿ (Ayodhya) ಬಾಬ್ರಿ ಮಸೀದಿ ಕೆಡವಿದ್ದ ನಂತರ ಅಲ್ಲಿಗೆ ಹೋಗಿದ್ದೆ. ಟೆಂಟ್​​ನಲ್ಲಿ ಎರಡು ಗೊಂಬೆಗಳನ್ನಿಟ್ಟು ರಾಮ ರಾಮ (Ram) ಎನ್ನುತ್ತಿದ್ದರು ಎಂದು ಸಚಿವ ಕೆನ್​ ರಾಜಣ್ಣ (KN Rajanna) ಹೇಳಿದ್ದರು. ಇವರ ಈ ಹೇಳಿಕೆಗೆ ವ್ಯಾಪಕ ವಿರೋಧ ಮತ್ತು ಟೀಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಇದೀಗ ಕೆಎನ್​ ರಾಜಣ್ಣ ತಮ್ಮ ಹೇಳಿಕೆಯನ್ನು ಸಮರ್ಥಸಿಕೊಂಡಿದ್ದಾರೆ. “ಸತ್ಯ ಹೇಳಿದ್ರೆ ತಪ್ಪಾ?, ಎಲ್ಲವೂ ನಮ್ಮ ನಂಬಿಕೆಗೆ ಬಿಡುವಂತಹದ್ದು. ಬಾಬ್ರಿ ಮಸೀದಿ ತೆರವು ಆದ ಮೇಲೆ ನಾನು ಹೋಗಿ ನೋಡಿದ್ದೇನೆ. ಅಯೋಧ್ಯೆಗೆ ಹೋದಾಗ ಇದ್ದ ಅಲ್ಲಿನ ಚಿತ್ರಣ ಹೇಳಿದ್ದೇನೆ ಅಷ್ಟೇ. ಏನು ಗೊಂಬೆಗಳನ್ನು ದೇವರು ಅಂತಾ ಪೂಜೆ ಮಾಡೋದೆ ಇಲ್ವಾ. ದಸರಾದಲ್ಲಿ ಬೊಂಬೆಗಳನ್ನು ಇಟ್ಟು ಪೂಜೆ ಮಾಡಲ್ವಾ? ಎಂದು ಹೇಳಿದರು.

ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಳ್ಳಿಗಳಲ್ಲಿ ಸಗಣಿ ಹುಂಡೆ ಮಾಡಿ ಗರಿಕೆ ಇಟ್ಟು ಪೂಜೆ ಮಾಡುತ್ತಾರೆ. ಅದನ್ನು ನಾವು ದೇವರು ಅಂದುಕೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ಟೆಂಟ್​​ನಲ್ಲಿ 2 ಗೊಂಬೆ ಇಟ್ಟು ರಾಮ, ರಾಮ ಎನ್ನುತ್ತಿದ್ದರು: ಅಯೋಧ್ಯೆ ಬಗ್ಗೆ ಸಚಿವ ರಾಜಣ್ಣ ವಿವಾದಿತ ಹೇಳಿಕೆ

ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯ ಐದು ವರ್ಷ ಪೂರ್ಣ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯತೀಂದ್ರ ಸ್ವಂತ ಅಭಿಪ್ರಾಯ ಹೇಳಿದ್ದಾರೆ, ಅದರಲ್ಲಿ ತಪ್ಪೇನಿದೆ?. ನಾನು ಸಿದ್ದರಾಮಯ್ಯ ಪರವಾಗಿಯೇ ಇರುವುದು. ಐದು ವರ್ಷ ಅವರೇ ಸಿಎಂ ಆಗಿರಬೇಕೆಂಬುದು ಜನರ ಆಶಯ ಕೂಡ. ಆದರೆ ಈ ಬಗ್ಗೆ ಅಂತಿಮ ನಿರ್ಣಯ ಹೈಕಮಾಂಡ್ ತೆಗೆದುಕೊಳ್ಳುತ್ತೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ