AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀರಾಮನ ಶಕ್ತಿ, ಹನುಮನ ಭಕ್ತಿಯ ಕೆಣಕಿದ ರಾವಣನೇ ಉಳಿಯಲಿಲ್ಲ, ರಾಜಣ್ಣ ಯಾವ ಲೆಕ್ಕ?: ಬಿಜೆಪಿ

ಬಾಬ್ರಿ ಮಸೀದಿ ಕೆಡವಿದ ನಂತರ ಅಯೋಧ್ಯೆಗೆ ಹೋಗಿದೆ. ಅಲ್ಲಿ ಗುಡಿಯೊಂದರಲ್ಲಿ ಎರಡು ಗೊಂಬೆಗಳನ್ನು ಇಟ್ಟು ರಾಮ ರಾಮ ಎನ್ನುತ್ತಿದ್ದರು" ಎಂದು ಸಚಿವ ಕೆನ್​ ರಾಜಣ್ಣ ವಿವಾದಾತ್ಮ ಹೇಳಿಕೆ ನೀಡಿದ್ದರು. ಇದಕ್ಕೆ ರಾಜ್ಯ ಬಿಜೆಪಿ ಘಟಕ ಟ್ವೀಟ್​ ಮಾಡುವ ಮೂಲಕ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದೆ.

ಶ್ರೀರಾಮನ ಶಕ್ತಿ, ಹನುಮನ ಭಕ್ತಿಯ ಕೆಣಕಿದ ರಾವಣನೇ ಉಳಿಯಲಿಲ್ಲ, ರಾಜಣ್ಣ ಯಾವ ಲೆಕ್ಕ?: ಬಿಜೆಪಿ
ಕೆಎನ್​​ ರಾಜಣ್ಣ, ಬಿಜೆಪಿ
TV9 Web
| Edited By: ವಿವೇಕ ಬಿರಾದಾರ|

Updated on: Jan 17, 2024 | 12:29 PM

Share

ಬೆಂಗಳೂರು, ಜನವರಿ 17: ಅಯೋಧ್ಯೆಯ (Ayodhya) ರಾಮಮಂದಿರದಲ್ಲಿ (Ram Mandir) ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಅಯೋಧ್ಯೆಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಮೂಲಕ ಬಿಜೆಪಿಯವರು ರಾಜಕೀಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಬಿಜೆಪಿಯ ಕಾರ್ಯಕ್ರಮವಾಗಿದೆ. ಹೀಗಾಗಿ ನಾವು ಈ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಕಾಂಗ್ರೆಸ್​ ನಾಯಕರು ಘೋಷಿಸಿದ್ದಾರೆ. ಇನ್ನು ಈ ಕಾರ್ಯಕ್ರಮವನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್​ ನಾಯಕರು ವಿವಾದತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಿನ್ನೆ (ಜ.16) ರಂದು ಸಚಿವ ಕೆನ್​ ರಾಜಣ್ಣ (KN Rajanna) ವಿವಾದಾತ್ಮ ಹೇಳಿಕೆ ನೀಡಿದ್ದರು.

ಅದು “ಬಾಬ್ರಿ ಮಸೀದಿ ಕೆಡವಿದ ನಂತರ ಅಯೋಧ್ಯೆಗೆ ಹೋಗಿದೆ. ಅಲ್ಲಿ ಗುಡಿಯೊಂದರಲ್ಲಿ ಎರಡು ಗೊಂಬೆಗಳನ್ನು ಇಟ್ಟು ರಾಮ ರಾಮ ಎನ್ನುತ್ತಿದ್ದರು” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಘಟನೆ ಸರಣಿ ಟ್ವೀಟ್​ ಮಾಡಿ ಸಚಿವರ ವಿರುದ್ಧ ವಾಗ್ದಾಳಿ ಮಾಡಿದೆ.

ಇದನ್ನೂ ಓದಿ: ನಾನೇ ಲಕ್ಷ್ಮಣ, ಅಯೋಧ್ಯೆಗೆ ಈಗ ಹೋಗಲ್ಲ: ಲಕ್ಷ್ಮಣ ಸವದಿ

“ಶ್ರೀರಾಮನ ಶಕ್ತಿ, ಹನುಮನ ಭಕ್ತಿಯ ಕೆಣಕಿದ ರಾವಣನೇ ಉಳಿಯಲಿಲ್ಲ, ರಾಜಣ್ಣ ಯಾವ ಲೆಕ್ಕ?ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಹಿಂದೂ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಕಾಂಗ್ರೆಸ್​ ಪಕ್ಷಕ್ಕೆ ಅಂಟಿದ ಕುಷ್ಠ ರೋಗವಿದ್ದಂತೆ” ಎಂದು ಬಿಜೆಪಿ ಹ್ಯಾಷ್​​ಟ್ಯಾಗ್​ ರಾಮ ವಿರೋಧಿ ಕಾಂಗ್ರೆಸ್​ ಅಂತ ಟ್ವೀಟ್​ ಮಾಡಿದೆ.

ಮುಂದುವರೆದು “ಶತ ಶತಮಾನಗಳ ಕೋಟ್ಯಂತರ ರಾಮಭಕ್ತರ ಹೋರಾಟ, ಸಹಸ್ರಾರು ಕರಸೇವಕರ ಬಲಿದಾನಗಳಿಂದ ಭವ್ಯ ರಾಮಮಂದಿರದಲ್ಲಿ ಬಾಲರಾಮ ನೆಲೆಸುತ್ತಿರುವ ಸಮಯದಲ್ಲಿ, ಶ್ರೀರಾಮ ಸೀತೆಯರನ್ನು ಗೊಂಬೆಗೆ ಹೋಲಿಸುತ್ತಿರುವ ಸಹಕಾರ ಸಚಿವ ರಾಜಣ್ಣರವರೇ, ನಾಡಿನ ಜನರಷ್ಟೇ ಅಲ್ಲ, ನಿಮ್ಮನ್ನು ಕಾಂಗ್ರೆಸ್​ ಕಾರ್ಯಕರ್ತರೂ ಕ್ಷಮಿಸಲಾರರು. ಅಧಿಕಾರದ ಮದ, ಕಾಂಗ್ರೆಸ್ ಗುಲಾಮಿತನದಿಂದ ಹೊರಬಂದು, ನಿಮ್ಮ ಕ್ಷೇತ್ರದ ಮತದಾರರನ್ನಾದರೂ ಕೇಳಿ, ನಿಮ್ಮ ಕುಟುಂಬಸ್ಥರನ್ನಾದರೂ ಕೇಳಿ ತಿಳಿಯಿರಿ” ಎಂದು ಕಿವಿ ಹಿಂಡಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ