ಧರಣಿಗೆ ಕೂತಾಗಲೂ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಆತ್ಮೀಯ ಮಾತುಕತೆ!
ಗಾಂಧಿ ಪ್ರತಿಮೆಯ ಕೆಳಗೆ ಸ್ವಲ್ಪಹೊತ್ತು ಕೂತ ನಂತರ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ರಾಜಭನದವದ ಕಡೆ ಜಾಥಾ ಹೊರಟರು. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಇವತ್ತು ವಿಚಾರಣೆ ಮುಂದುವರಿಯಲಿದ್ದು ನ್ಯಾಯಾಲಯವು ತೀರ್ಪು ನೀಡುವ ನಿರೀಕ್ಷೆ ಇದೆ.
ಬೆಂಗಳೂರು: ಮುಡಾ ಪ್ರಕರಣದ ವಿವಾದ ಶುರುವಾದ ಬಳಿಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿರುವುದು ಸುಳ್ಳಲ್ಲ. ಸಿಎಂ ಹಿಂದೆ ಡಿಸಿಎಂ ಬಂಡೆಯಂತೆ ನಿಂತಿದ್ದಾರೆ. ಇವತ್ತು ಕಾಂಗ್ರೆಸ್ ಪಕ್ಷದ ಮಂತ್ರಿಗಳು, ಶಾಸಕರು, ಸಂಸದರು ಮತ್ತು ಕಾರ್ಯಕರ್ತರು ರಾಜ್ಯಪಾಲರ ಕ್ರಮದ ವಿರುದ್ಧ ವಿಧಾನಸೌಧದಲ್ಲಿರುವ ಗಾಂಧಿ ಪ್ರತಿಮೆಯ ಅಡಿ ಧರಣಿ ಕೂತಾಗ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ನಡೆದ ಆತ್ಮೀಯ ಮಾತುಕತೆಯನ್ನು ದೃಶ್ಯಗಳಲ್ಲಿ ನೋಡಬಹುದು. ಧರಣಿಗೆ ಕೂತ ಕಾರ್ಯಕರ್ತರ ಕೈಗಳಲ್ಲಿ ರಾಜ್ಯಪಾಲರ ವಿರುದ್ಧ ಬರೆದ ಪ್ಲಕಾರ್ಡ್ ಗಳಿದ್ದವು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಡಾ ಪ್ರಕರಣ ಬೆಳಕಿಗೆ ಬಂದ ನಂತರ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಹೆಚ್ಚಿದ ಕಾಮರಾಡರೀ!
Latest Videos