ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ, ಅರ್ಧ ಗಂಟೆ ಸುತ್ತಾಡಿ ದೇವಿ ದರ್ಶನ ಪಡೆದ ಮಾಜಿ ಸಿಎಂ, ಆಗಿದ್ದೇನು?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ನವೆಂಬರ್ 06) ಹಾಸನಾಂಬೆಯ ದರ್ಶನ ಪಡೆದುಕೊಂಡರು. ಆದ್ರೆ, ಅಮ್ಮನ ದರ್ಶನ ಪಡೆಯಲು ಮಾಜಿ ಸಿದ್ದರಾಮಯ್ಯ ಅರ್ಧ ಗಂಟೆ ಸುತ್ತಾಡಿ ಬರಬೇಕಾಯ್ತು. ಹೌದು... ಸಿದ್ದರಾಮಯ್ಯ ಹಾಸನಾಂಬೆ ದರ್ಶನಕ್ಕೆ ಆಗಮಿಸುವ ವೇಳೆ ಗೊಂದಲ ಉಂಟಾಗಿದ್ದು, ಡಿಸಿ, ಎಸ್ಪಿ ಮತ್ತೊಂದು ಇನೋವಾ ಕಾರು ಬರುತ್ತಿದ್ದಂತೆ ಗೇಟ್ ಬಂದ್ ಮಾಡಲಾಗಿದೆ. ಹೀಗಾಗಿ ಗೇಟ್ ಬಂದ್ ಆಗಿದೆ ಎಂದು ತಿಳಿದು ಸಿದ್ದರಾಮಯ್ಯನವರ ಕಾರು ದೇವಸ್ಥಾನದಿಂದ ಮುಂದೆ ಹೋಗಿದೆ. ಇದರಿಂದ ರಸ್ತೆ ತಪ್ಪಿದ್ದು, ಟ್ರಾಫಿಕ್ನಲ್ಲಿ ಸಿಲುಕಿದರು.
ಹಾಸನ, (ನವೆಂಬರ್ 06): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ನವೆಂಬರ್ 06) ಹಾಸನಾಂಬೆಯ ದರ್ಶನ ಪಡೆದುಕೊಂಡರು. ಆದ್ರೆ, ಅಮ್ಮನ ದರ್ಶನ ಪಡೆಯಲು ಮಾಜಿ ಸಿದ್ದರಾಮಯ್ಯ ಅರ್ಧ ಗಂಟೆ ಸುತ್ತಾಡಿ ಬರಬೇಕಾಯ್ತು. ಹೌದು… ಸಿದ್ದರಾಮಯ್ಯ ಹಾಸನಾಂಬೆ ದರ್ಶನಕ್ಕೆ ಆಗಮಿಸುವ ವೇಳೆ ಗೊಂದಲ ಉಂಟಾಗಿದ್ದು, ಡಿಸಿ, ಎಸ್ಪಿ ಮತ್ತೊಂದು ಇನೋವಾ ಕಾರು ಬರುತ್ತಿದ್ದಂತೆ ಗೇಟ್ ಬಂದ್ ಮಾಡಲಾಗಿದೆ. ಹೀಗಾಗಿ ಗೇಟ್ ಬಂದ್ ಆಗಿದೆ ಎಂದು ತಿಳಿದು ಸಿದ್ದರಾಮಯ್ಯನವರ ಕಾರು ದೇವಸ್ಥಾನದಿಂದ ಮುಂದೆ ಹೋಗಿದೆ. ಇದರಿಂದ ರಸ್ತೆ ತಪ್ಪಿದ್ದು, ಟ್ರಾಫಿಕ್ನಲ್ಲಿ ಸಿಲುಕಿದರು.
ಇತ್ತ ಎಸಿ, ಡಿಸಿಯವರು ಸಿದ್ದರಾಮಯ್ಯನವರು ಎಲ್ಲಿ ಹೋದರು ಎಂದು ಕೆಲ ಕ್ಷಣ ಗಾಬರಿಯಾಗಿದ್ರು. ಕೊನೆಗೆ ಸಿದ್ದರಾಮಯ್ಯ ಕಾರು ಸಂತೇಪಟೆ ವೃತ್ತ ಬಳಸಿ ದೇಗುಲಕ್ಕೆ ಆಗಮಿಸಿದ್ದು, ಆಗ ಸಚಿವ ಶಿವಲಿಂಗೇಗೌಡ ಬಂದು ಯಾಕ್ರಿ ಹೀಗೆ ಕನ್ಫ್ಯೂಸ್ ಮಾಡುತ್ತೀರಾ ಎಂದು ಸಿಟ್ಟಿನಿಂದ ಕೇಳಿರುವ ಪ್ರಸಂಗವೂ ನಡೆಯಿತು. ಅಂತಿಮವಾಗಿ ಸಿದ್ದರಾಮಯ್ಯನವರು ಇದ್ದ ಕಾರು ದಾರಿ ತಪ್ಪಿ ಟ್ರಾಫಿಕ್ನಲ್ಲಿ ಸಿಲುಕಿಕೊಂಡು ಅರ್ಧ ಗಂಟೆ ಬಳಿಕ ದೇವಸ್ಥಾನಕ್ಕೆ ಬಂತು.
