Karnataka Assembly Session: ಸಿದ್ದರಾಮಯ್ಯ ತಮ್ಮ ತಂದೆಗೆ ಬೇರೆಯವರು ಫೇಲಾಗಿದ್ದು ಹೇಳಿದರೇ ಹೊರತು ತಾವು ಫೇಲಾಗಿದ್ದು ಹೇಳಲಿಲ್ಲ! ಅಶೋಕ

ಅರುಣ್​ ಕುಮಾರ್​ ಬೆಳ್ಳಿ

Updated on: Aug 22, 2025 | 3:30 PM

ನಿನ್ನೆ ಗೃಹ ಸಚಿವ ಪರಮೇಶ್ವರ್ ಹೇಳದಿರುವುದನ್ನು ತಾನು ಹೇಳುವುದಾಗಿ ತಿಳಿಸಿದ ಸಿದ್ದರಾಮಯ್ಯ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಕಾರ್ಯಕ್ರಮ ನಡೆಸುವ ಪರವಾನಗಿ ಇರಲಿಲ್ಲ ಅಂತಷ್ಟೇ ಹೇಳಿದರು. ಒಂದು ಪಕ್ಷ ಕೆಎಸ್​ಸಿಎಯವರಿಗೆ ಅನುಮತಿ ಇರಲಿಲ್ಲ ಅಂತಾದರೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಯಾಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು? ನಮಗೆ ಇದಕ್ಕೆ ಸ್ಪಷ್ಟನೆ ಬೇಕು ಅಂತ ಅಶೋಕ ಒತ್ತಾಯಿಸಿದರು.

ಬೆಂಗಳೂರು, ಆಗಸ್ಟ್ 22: ಸದನದಲ್ಲಿ ಇಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ (CM Siddaramaiah) ನೀಡಿದ ಉತ್ತರ ಸಮಾಧಾನಕರವಾಗಿರಲಿಲ್ಲ ಅನ್ನೋದನ್ನ ರಸವತ್ತಾಗಿ ಬಣ್ಣಿಸುತ್ತಾ ಸಿಎಂ ಕಾಲೆಳೆದರು. ತಮ್ಮ ಪರೀಕ್ಷೆಯ ಫಲಿತಾಂಶವನ್ನು ತಂದೆಗೆ ತಿಳಿಸುವಾಗ ಸಿದ್ದರಾಮಯ್ಯ, ಅವನು ಫೇಲ್, ಇವನು ಫೇಲು, ಭೀಮ ಫೇಲ್, ಸೋಮ ಫೇಲು ಅಂತ ಹೇಳಿದರೆ ಹೊರತು ತಾವು ಫೇಲಾಗಿರುವ ವಿಷಯವನ್ನು ಹೇಳಲೇ ಇಲ್ವಂತೆ! ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಉತ್ತರಗಳನ್ನು ಸಿಎಂ ಹಾಗೆಯೇ ನೀಡಿದರು. ಜಗತ್ತು ಸುತ್ತಿಸಿದರಾದರೂ ವಿಪಕ್ಷದವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಮಾತ್ರ ಕೊಡಲಿಲ್ಲ ಎಂದು ಆಶೋಕ ಹೇಳಿದರು.

ಇದನ್ನೂ ಓದಿ:   ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಸದನದಲ್ಲಿ ಅಶೋಕ್​ ಪ್ರಶ್ನೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.