Loading video

ಅದೇನು ಕಟೆದು ಗುಡ್ಡೆ ಹಾಕಿದ್ದು ಅಂತ ಕಾಂಗ್ರೆಸ್ ಸರ್ಕಾರ ಸಾಧನೆ ಸಮಾವೇಶ ಮಾಡುತ್ತಿದೆ? ಬಿವೈ ವಿಜಯೇಂದ್ರ

Updated on: May 19, 2025 | 3:04 PM

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶೂನ್ಯ ಸಾಧನೆಯ ಸಮಾವೇಶ ಮಾಡುತ್ತಿದ್ದಾರೆ, ಸರ್ಕಾರದ ಭಂಡತನ ಜಗಜ್ಜಾಹೀರಾಗಿದೆ, ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೋಢೀಕರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ, ಆ ವಿಚಾರ ಬೇರೆ, ಹಾಗಂತ ಗ್ಯಾರಂಟಿ ಯೋಜನೆಗಳನ್ನೇ ಅಭಿವೃದ್ಧಿ ಕೆಲಸಗಳು ಅಂತ ಬಿಂಬಿಸಲಾದೀತೆ ಎಂದು ವಿಜಯೇಂದ್ರ ಪ್ರಶ್ನಿಸಿದರು.

ಬೆಂಗಳೂರು, ಮೇ 19: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಂಗಳವಾರ ಸಾಧನಾ ಸಮಾವೇಶಕ್ಕೆ ಅಣಿಯಾಗುತ್ತಿರುವ ಕಾಂಗ್ರೆಸ್ ಸರ್ಕಾರವನ್ನು (Congress government) ತೀಕ್ಷ್ಣವಾಗಿ ಟೀಕಿಸಿದರು. ಕಳೆದ ಎರಡು ವರ್ಷಗಳಲ್ಲಿ ಇವರು ಏನು ಕಟೆದು ಗುಡ್ಡೆಹಾಕಿದ್ದಾರೆ ಅಂತ ಸಾಧನಾ ಸಮಾವೇಶ ಮಾಡುತ್ತಿದ್ದಾರೆ, ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ನಿಂತುಹೋಗಿವೆ, ಆಡಳಿತ ಪಕ್ಷದ ಶಾಸಕರೇ ತಮ್ಮ ಕ್ಷೇತ್ರಗಳಲ್ಲಿ ಒಂದು ಶಾಲಾ ಕೊಠಡಿ ಕಟ್ಟಿಸಲು ಮತ್ತು ಸರ್ಕಾರೀ ಆಸ್ಪತ್ರೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲೂ ಸಾಧ್ಯವಾಗುತ್ತಿಲ್ಲ ಎಂದು ಗೋಳಿಡುತ್ತಿದ್ದಾರೆ, ಅಂಥದರಲ್ಲಿ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ? ಸರ್ಕಾರದ ದುಂದುವೆಚ್ಚ ನೋಡಿ ಜನ ಲೇವಡಿ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಇದನ್ನೂ ಓದಿ:  ಪ್ರಿಯಾಂಕ್ ಖರ್ಗೆ ವೃಥಾ ಟೀಕೆಗಳನ್ನು ಮಾಡದೆ ಸೇನೆ ಜೊತೆ ನಿಂತುಕೊಳ್ಳಲಿ: ಬಿವೈ ವಿಜಯೇಂದ್ರ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ