ಬಡವರ ಅನ್ನ ಕಸಿಯುತ್ತಿರುವ ಸಿದ್ದರಾಮಯ್ಯ ಸರ್ಕಾರಕ್ಕೆ ಶಾಪ ತಟ್ಟದಿರದು: ಬಸವರಾಜ ಬೊಮ್ಮಾಯಿ

|

Updated on: Nov 21, 2024 | 2:07 PM

ರಾಜ್ಯದಲ್ಲಿ ಈಗ ಅಸ್ತಿತ್ವದಲ್ಲಿರುವ ಸರ್ಕಾರ ಒಂದು ಬಗೆಯ ಯು-ಟರ್ನ್ ಸರ್ಕಾರ, ಮುಡಾದಿಂದ ಪಡೆದ ಸೈಟುಗಳನ್ನು ವಾಪಸ್ಸು ನೀಡಲಾಯಿತು, ವಕ್ಫ್ ಬೋರ್ಡ್ ರೈತರಿಗೆ ನೀಡಿದ್ದ ನೋಟೀಸ್​ಗಳನ್ನು ವಾಪಸ್ಸು ಪಡೆಯಲಾಯಿತು, ಸರ್ಕಾರಿ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರಿಗೆ 4 ಪರ್ಸೆಂಟ್ ಮೀಸಲಾತಿ ಕಲ್ಪಿಸುವ ಯೋಜನೆ ಹಿಂತೆಗೆದುಕೊಳ್ಳಲಾಯಿತು ಮತ್ತು ಈಗ ಬಿಪಿಎಲ್ ಕಾರ್ಡ್​ಗಳನ್ನು ವಾಪಸ್ಸು ಪಡೆಯುವ ಕೆಲಸ ಜಾರಿಯಲ್ಲಿದೆ ಎಂದು ಬೊಮ್ಮಾಯಿ ಹೇಳಿದರು.

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರಕಾರ ಬಡವರ ಅನ್ನ ಕಸಿದುಕೊಂಡು ರಾಜ್ಯವನ್ನು ನರಕ ಮಾಡಹೊರಟಿದೆ, ತಿಂಗಳಿಗೆ ಎರಡು ಮೂರು ಸಾವಿರ ರೂಪಾಯಿ ಕೂಡ ಸಂಪಾದಿಸಿದ ರಾಜ್ಯದ ಕಟ್ಟಕಡೆಯ ಬಡವರ ರೇಷನ್ ಕಾರ್ಡನ್ನು ಸರ್ಕಾರ ಕಿತ್ತುಕೊಂಡಿದೆ, ಪಡಿತರ ಚೀಟಿಗಾಗಿ ಕೆಲವರು ಮೂರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಸಿಕ್ಕಿಲ್ಲ, ಈಗ ಕಾರ್ಡ್ ರದ್ದಾದವರು ಸಹ ಹೊಸ ಕಾರ್ಡ್ ಪಡೆಯಲು 3 ವರ್ಷಗಳ ಅಲೆದಾಡಬೇಕು, ಅನ್ನಭಾಗ್ಯದ ಬದಲು ಹಸೀನಾ ಭಾಗ್ಯವನ್ನು ಜಾರಿಗೊಳಿಸುವ ಪ್ರಯತ್ನ ಸರ್ಕಾರ ಮಾಡುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಕಿಡಿ ಕಾರಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಜನಾಕ್ರೋಶದಿಂದ ಎಚ್ಚೆತ್ತ ಸರ್ಕಾರ, ಬಿಪಿಎಲ್​ ಕಾರ್ಡ್​​ ರದ್ದು ಮಾಡದಂತೆ ಸಿಎಂ ಆದೇಶ