Karnataka Budget 2025; ಸಿದ್ದರಾಮಯ್ಯ ಒಂದು ಐತಿಹಾಸಿಕ ಮತ್ತು ಜನಪರ ಬಜೆಟ್ ಮಂಡಿಸಿದ್ದಾರೆ: ಡಿಕೆ ಶಿವಕುಮಾರ್

|

Updated on: Mar 07, 2025 | 5:44 PM

ಕಳೆದ 36 ವರ್ಷಗಳಿಂದ ರಾಜಕಾರಣದಲ್ಲಿದ್ದು ಅದೇ ಅನುಭವದಿಂದ ಹೇಳುತ್ತಿದ್ದೇನೆ, ಇದೊಂದು ಐತಿಹಾಸಿಕ ಬಜೆಟ್ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಮುಸ್ಲಿಂ ಓಲೈಕೆಯ ಅರೋಪವನ್ನು ಬದಿಗೊತ್ತಿದ ಡಿಸಿಎಂ, ಸರ್ಕಾರ ನಡೆಸುವಾಗ ಎಲ್ಲರನ್ನು ಓಲೈಸಬೇಕಾಗುತ್ತದೆ, ಅದರೆ ಮುಖ್ಯಮಂತ್ರಿಯವರು ಜನಪರವಾದ ಬಜೆಟ್ ನೀಡಿದ್ದಾರೆ ಎಂದು ಹೇಳಿದರು.

ಬೆಂಗಳೂರು, ಮಾರ್ಚ್ 7: ಸಿದ್ದರಾಮಯ್ಯ ಇವತ್ತು ಸದನದಲ್ಲಿ ಮಂಡಿಸಿದ ಬಜೆಟ್ ಕೇವಲ ಬಜೆಟ್ ಅಲ್ಲ, ಎಲ್ಲ ವರ್ಗಗಳನ್ನು ಸಂತೃಪ್ತಿಪಡಿಸುವ ಒಂದು ಮೃಷ್ಟಾನ್ನ ಎಂದು ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರು ನಗರ (Bengaluru City) ಅಭಿವೃದ್ಧಿಗಾಗಿ ಒಂದು ಲಕ್ಷ ಕೋಟಿ ರೂ. ತೆಗೆದಿರಿಸಿದ್ದಾರೆ, ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಗಳಿಗೆ ಸಾಕಷ್ಟು ಹಣ ನೀಡಿದ್ದಾರೆ, ಎಲ್ಲ ಶಾಸಕರಿಗೆ ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ರೂ. 8,000 ಕೋಟಿ ಹಣವನ್ನು ಬದಿಗಿರಿಸಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Budget 2025: ಮಲ್ಟಿಪ್ಲೆಕ್ಸ್​ಗಳ ನಟ್ಟು-ಬೋಲ್ಟು ಟೈಟ್ ಮಾಡಿದ ರಾಜ್ಯ ಸರ್ಕಾರ

 

Published on: Mar 07, 2025 05:42 PM