ಹಿರಿಯರು ಮತ್ತು ತಂದೆಸಮಾನರಾಗಿರುವ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದರೆ ತಪ್ಪೇನಿದೆ? ಕೊತ್ತೂರು ಮಂಜುನಾಥ್

Updated on: Jul 21, 2025 | 8:15 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ, ವಿರೋಧ ಪಕ್ಷದ ಶಾಸಕರಿಗೆ ₹ 25 ಕೋಟಿ ಕೊಟ್ಟಿದ್ದಾರೆ, ಕಾಂಗ್ರೆಸ್ ಶಾಸಕರಿಗೆ ₹ 50 ಕೋಟಿ ಕೊಟ್ಟಿದ್ದಾರೆ, ಮುಂದಿನ ಸಲ ಅನುದಾನ ಹಂಚುವಾಗ ಅವರಿಗೆ ಕೊಟ್ಟು ತಮಗೆ ಕೊಡದಿರಬಹುದು, 2014 ರಲ್ಲಿ ಡಿ ಚಂದ್ರಬಾಬು ನಾಯ್ಡು ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳಾಗಿದ್ದಾಗ ಕೆಎಲ್​ಡಿಇ ಫಂಡ್ಸ್​ನಿಂದ ವಿಪಕ್ಷ ಶಾಸಕರಿಗೆ ಒಂದು ರೂ. ಕೂಡ ಕೊಟ್ಟಿರಲಿಲ್ಲ ಎಂದು ಕೊತ್ತೂರು ಮಂಜುನಾಥ್ ಹೇಳಿದರು.

ಕೋಲಾರ, ಜುಲೈ 21: ಕೋಲಾರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರು. ಮುಳುಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್​ಗೆ ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಕಾಲಿಗೆ ನಮಸ್ಕಾರ ಮಾಡಿ ಅನುದಾನ ಪಡೆದುಕೊಳ್ಳಿ ಅಂತ ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ಇವತ್ತು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡುವಾಗ ತಾನಾಡಿದ ಮಾತುಗಳಿಗೆ ಸ್ಪಷ್ಟನೆ ನೀಡಿದ ಕೊಟ್ಟೂರು ಮಂಜುನಾಥ್, ಮುಳುಬಾಗಿಲು ಶಾಸಕ ಹೇಳಿರುವ ಹಾಗೆ ಕಾಲಿಗೆ ಬಿದ್ದೇ ಅನುದಾನ ಪಡೆಯಬೇಕೆಂದು ನಾನೇನೂ ಹೇಳಿಲ್ಲ, ಸಿದ್ದರಾಮಯ್ಯ ವಯಸ್ಸಿನಲ್ಲಿ ಹಿರಿಯರು, ತಂದೆ ಸಮಾನರು; ಅವರ ಕಾಲಿಗೆ ನಮಸ್ಕಾರ ಮಾಡಿ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಬೇಕೆಂದು ಮನವಿ ಮಾಡಿಕೊಂಡರೆ ಅದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ: ಆಪರೇಷನ್​ ಸಿಂದೂರ್​ ಬಗ್ಗೆ ವಿವಾದಾತ್ಮ ಹೇಳಿಕೆ: ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ದೂರು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ