ಸಿಂಹ ಅಂದರೆ ಗರ್ಜಿಸಬೇಕು ಬಾಯಿಬಡ್ಕೊಂಡು ತಿರುಗಬಾರದು; ಪ್ರತಾಪ್ ಸಿಂಹನಿಗೆ ಹೇಳಿದ ಪ್ರದೀಪ್ ಈಶ್ವರ್

Updated on: Jul 18, 2025 | 3:14 PM

ಸಿಗಂದೂರು ಚೌಡೇಶ್ವರಿ ಸೇತುವೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಹ್ವಾನವಿಲ್ಲದೆ ಹೋಗಲು ಪ್ರತಾಪ್ ಸಿಂಹನಂತೆ ಕೆಲಸವಿಲ್ಲದವರೇನೂ ಅಲ್ಲ, ಅವರು ನಾಡಿನ ಮುಖ್ಯಮಂತ್ರಿ ಎನ್ನುವ ಪ್ರದೀಪ್ ಈಶ್ವರ್ ಕರೆಯದೆ ಬಂದವನು, ಕರೆದು ಬರದವನು ಕರೆದು ಕೆರದಲ್ಲಿ ಹೊಡೆ ಸರ್ವಜ್ಞ ಎಂದು ಸರ್ವಜ್ಞನ ವಚನ ಹೇಳುತ್ತಾರೆ.

ಬೆಂಗಳೂರು, ಜುಲೈ 18: ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಿನ್ನೆ ಮೈಸೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಲವು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹರ (Pratap Simha) ವಿರುದ್ಧ ಹರಿಹಾಯ್ದರು. ಪ್ರತಾಪ್ ರನ್ನು ಪೇಪರ್ ತಿಮ್ಮ ಅಂತ ಸಂಬೋಧಿಸಿದ ಈಶ್ವರ್, ಸಚಿವರಾದ ಸಂತೋಷ್ ಲಾಡ್ ಮತ್ತು ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಬಿಚ್ಚಿಸುತ್ತೇನೆ ಅಂತ ಮಾಜಿ ಸಂಸದ ಹೇಳುವ ಬದಲು, ತನಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾಕೆ ಟಿಕೆಟ್ ಕೊಡಲಿಲ್ಲ? ದೇಶದ್ರೋಹಿಗಳಿಗೆ ಸಂಸತ್ ನೊಳಗೆ ಪ್ರವೇಶಿಸಲು ಯಾಕೆ ಪಾಸು ನೀಡಿದರು ಅನ್ನೋದನ್ನು ಜನತೆಗೆ ಹೇಳಬೇಕು, ಪ್ರತಾಪ್ ಅವರದ್ದನ್ನು ಬಿಚ್ಚಿಡಲು ತನಗೆ ಬಹಳ ಹೊತ್ತೇನೂ ಬೇಕಾಗಲ್ಲ ಎಂದು ಪ್ರದೀಪ್ ಹೇಳಿದರು.

ಇದನ್ನೂ ಓದಿ: ದೊಡ್ಡದಾಗಿ ಮಾತಾಡುವ ಪ್ರದೀಪ್ ಈಶ್ವರ್ ಬಲಿಜ ಸಮುದಾಯಕ್ಕೆ ನೀಡಿರುವ ಕೊಡುಗೆ ಏನು? ಪಿಸಿ ಮೋಹನ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ