ರಾಷ್ಟ್ರದ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಒಬ್ಬರು, ಜನನಾಯಕ: ಬಸವರಾಜ ರಾಯರೆಡ್ಡಿ, ಶಾಸಕ

|

Updated on: Sep 04, 2023 | 12:30 PM

ಅವರೊಬ್ಬ ಜನನಾಯಕ, ತಾವಿಬ್ಬರು ರಾಜಕೀಯದಲ್ಲಿ ಜತೆಯಾಗಿ ಬೆಳೆದವರು, ಭಾರತದ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಒಬ್ಬರು ಅನ್ನೋದರಲ್ಲಿ ಅನುಮಾನವಿಲ್ಲ ಎಂದು ಅವರು ಮುಖ್ಯಮಂತ್ರಿಯವರ ಗುಣಗಾನ ಮಾಡಿದರು. ಬಿಜೆಪಿ ಸೇರೋದು ದೊಡ್ಡ ಸಂಗತಿಯೇನಲ್ಲ, ಆದರೆ ತಾನು ಆದರ್ಶಗಳನ್ನು ಪಾಲಿಸುವ ಸಿದ್ಧಾಂತವಾದಿ, ಬಿಜೆಪಿಯ ಸಿದ್ಧಾಂತ ತನಗೆ ಒಗ್ಗಲ್ಲ ಎಂದು ರಾಯರೆಡ್ಡಿ ಹೇಳಿದರು.

ಧಾರವಾಡ: ಹಿರಿಯ ರಾಜಕಾರಣಿ ಮತ್ತು ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy ) ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ (Siddaramaiah government) ಅಸ್ತಿತ್ವಕ್ಕೆ ಬಂದ ದಿನದಿಂದ ಸುದ್ದಿಯಲ್ಲಿದ್ದಾರೆ. ಸಚಿವ ಸ್ಥಾನ ಸಿಗದಿರುವುದಕ್ಕೆ ಅವರಲ್ಲಿ ಅಸಮಾಧಾನವಂತೂ ಇದ್ದೇ ಇದೆ ಮತ್ತು ಸರ್ಕಾರ ರಚನೆಗೊಂಡು 100 ದಿನಗಳಾದರೂ ಅದು ಶಮನಗೊಂಡಿಲ್ಲ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ರಾಯರೆಡ್ಡಿಯವರನ್ನು ಭೇಟಿಯಾಗಲು ಇಂದು ಸಿದ್ದರಾಮಯ್ಯ ಸರ್ಕಾರದ ಇಬ್ಬರು ಸಚಿವರು- ಡಾ ಶರಣಪ್ರಕಾಶ್ ಪಾಟೀಲ್ (Dr Sharan Prakash Patil) ಮತ್ತು ಡಾ ಎಂಸಿ ಸುಧಾಕರ್ (Dr MC Sudhakar) ಆಗಮಿಸಿದ್ದರು. ಗೋವಾ ರಸ್ತೆಯಲ್ಲಿರುವ ಶಾಸಕರ ಫಾರ್ಮ್ ಹೌಸ್ ನಲ್ಲಿ ಗಣ್ಯರು ಕೂತು ಮಾತುಕತೆ ನಡೆಸುತ್ತಿದ್ದಾಗ ಟಿವಿ9 ಕನ್ನಡ ವಾಹಿನಿಯ ಧಾರವಾಡ ವರದಿಗಾರ ರಾಯರೆಡ್ಡಿಯರನ್ನು ಮಾತಾಡಿಸಿದರು. ಸಿದ್ದರಾಮಯ್ಯನವರ ಬಗ್ಗೆ ತನಗೆ ಆಪಾರ ಗೌರವ ಇದೆ, ಅವರೊಬ್ಬ ಜನನಾಯಕ, ತಾವಿಬ್ಬರು ರಾಜಕೀಯದಲ್ಲಿ ಜತೆಯಾಗಿ ಬೆಳೆದವರು, ಭಾರತದ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಒಬ್ಬರು ಅನ್ನೋದರಲ್ಲಿ ಅನುಮಾನವಿಲ್ಲ ಎಂದು ಅವರು ಮುಖ್ಯಮಂತ್ರಿಯವರ ಗುಣಗಾನ ಮಾಡಿದರು. ಬಿಜೆಪಿ ಸೇರೋದು ದೊಡ್ಡ ಸಂಗತಿಯೇನಲ್ಲ, ಆದರೆ ತಾನು ಆದರ್ಶಗಳನ್ನು ಪಾಲಿಸುವ ಸಿದ್ಧಾಂತವಾದಿ, ಬಿಜೆಪಿಯ ಸಿದ್ಧಾಂತ ತನಗೆ ಒಗ್ಗಲ್ಲ ಎಂದು ರಾಯರೆಡ್ಡಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ