ಮುಖ್ಯಮಂತ್ರಿಯಾಗಲು ಶಿವಕುಮಾರ್ ಏನಾದರೂ ಮಾಡಬಲ್ಲರು, ಸಿದ್ದರಾಮಯ್ಯ ಎಚ್ಚರದಿಂದಿರಬೇಕು: ರಾಜುಗೌಡ, ಮಾಜಿ ಶಾಸಕ

|

Updated on: May 03, 2024 | 11:08 AM

ರಾಹುಲ್ ಗಾಂಧಿಯವರ ಮನಸ್ಸಲ್ಲೂ ಅದೇ ಇರುವಂತಿದೆ, ಮಂಬರುವ ದಿನಗಳಲ್ಲಿ ಅವರು ಸಿದ್ದರಾಮಯ್ಯರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಬಹುದು ಎಂದು ರಾಜುಗೌಡ ಹೇಳಿದರು.

ಯಾದಗಿರಿ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಇದೆ ಅದಕ್ಕಾಗಿ ಅವರು ಏನು ಬೇಕಾದರೂ ಮಾಡಬಲ್ಲru, ಕಾರ್ಯಸಾಧನೆಗಾಗಿ ಹಲವಾರು ಅಸ್ತ್ರಗಳನ್ನು ಅವರು ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಶಾಸಕ ನರಸಿಂಹ ನಾಯಕ್ (Narasimha Nayak) (ರಾಜು ಗೌಡ) ಹೇಳಿದರು. ಯಾದಗಿರಿಯಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಅವರು, ಜನ ಕಾದು ನೋಡಲಿ, ಮುಂದೊಂದು ದಿನ ಅವರು ಯತೀಂದ್ರ ಸಿದ್ದರಾಮಯ್ಯ ಮೇಲೆ ಯಾವುದಾದರೂ ಆರೋಪ ಹೊರೆಸಿ ಅದಕ್ಕೆ ಸಂಬಂಧಿಸಿದ ವಿಡಿಯೋ ಬಿಡುಗಡೆ ಮಾಡಿ ಸಿದ್ದರಾಮಯ್ಯರನ್ನು (CM Siddaramaiah) ಸಿಎಂ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಇಲ್ಲದಿಲ್ಲ ಎಂದರು. ಹಾಗಾಗೇ, ಡಿಕೆ ಸಹೋದರರ ಜೊತೆ ಹೆಚ್ಚು ಒಡನಾಟ ಇಟ್ಟುಕೊಳ್ಳುವುದು ಬೇಡ ಅಂತ ಸಿದ್ದರಾಮಯ್ಯವನವರಿಗೆ ತಾನು ಸಲಹೆ ನೀಡಬಯಸುವುದಾಗಿ ರಾಜುಗೌಡ ಹೇಳಿದರು. ರಾಹುಲ್ ಗಾಂಧಿಯವರ ಮನಸ್ಸಲ್ಲೂ ಅದೇ ಇರುವಂತಿದೆ, ಮಂಬರುವ ದಿನಗಳಲ್ಲಿ ಅವರು ಸಿದ್ದರಾಮಯ್ಯರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಬಹುದು ಎಂದು ರಾಜುಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ಬ್ರದರ್​ ಕುಮಾರಸ್ವಾಮಿಗೆ ಎಲ್ಲವೂ ಗೊತ್ತು, ಕೇಂದ್ರದಿಂದ ಮಾಹಿತಿ ಪಡೆದಿರ್ತಾರೆ ಎಂದ ಡಿಕೆ ಶಿವಕುಮಾರ್