Loading video

ಆರ್​ಸಿಬಿ ಕಾರ್ಯಕ್ರಮಕ್ಕೆ ಡಿಪಿಆರ್​ಗೆ ಸಹಿ ಮಾಡಿದ್ದು ಮತ್ತು ರಾಜ್ಯಪಾಲರನ್ನು ಆಹ್ವಾನಿಸಿದ್ದು ಸಿದ್ದರಾಮಯ್ಯ: ಆರ್ ಅಶೋಕ

Updated on: Jun 17, 2025 | 1:40 PM

ಆರ್​ಸಿಬಿ ಆಟಗಾರರ ಸತ್ಕಾರ ಸಮಾರಂಭಕ್ಕೆ ರಾಜ್ಯಪಾಲರನ್ನು ಆಹ್ವಾನಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಪಿಅರ್ ಆದೇಶ ಪ್ರತಿಗೆ ಸಹಿ ಹಾಕಿದ್ದು ಸಹ ಅವರೇ, ಅಲ್ಲಿ ಕ್ರಿಕೆಟ್ ಆಟದಲ್ಲಿ ವಿರಾಟ್ ಕೊಹ್ಲಿ ಟೀಮು ಗೆದ್ದಿತು, ಅದರೆ ಆಟಗಾರರನ್ನು ಸತ್ಕರಿಸುವ ಕಾರ್ಯಕ್ರಮ ಆಯೋಜಿಸುವುದಕ್ಕೆ ಸಂಬಂಧಿಸಿದಂತೆ ಗೆದ್ದವರು ಯಾರು ಅಂತ ಸಿಎಂ ಮತ್ತು ಡಿಸಿಎಂ ನಡುವೆ ಪೈಪೋಟಿ ನಡೆದಿತ್ತು ಎಂದು ಅಶೋಕ ಹೇಳಿದರು.

ಬೆಂಗಳೂರು, ಜೂನ್ 17: ಬೆಂಗಳೂರಲ್ಲಿ ಜೂನ್ 4 ರಂದು ಆರ್​ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತ (stampede) ಘಟನೆಯಲ್ಲಿ 11 ಜನ ಸತ್ತಿದ್ದಕ್ಕೆ ನ್ಯಾಯ ಆಗ್ರಹಿಸಿ ಬಿಜೆಪಿ ನಾಯಕರು ಇಂದು ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆಯನ್ನು ಪುನರಾರಂಭಿಸಿದರು. ಈ ಸಂದರ್ಭದಲ್ಲಿ ಮಾತಾಡಿದ ವಿರೋಧ ಪಕ್ಷದ ನಾಯಕ ಆರ್​ ಅಶೋಕ, ಸತ್ತವರಿಗೆ ನ್ಯಾಯ ಸಿಗದ ಹೊರತು ಬಿಜೆಪಿ ಹೋರಾಟ ನಿಲ್ಲಿಸಲ್ಲ ಎಂದು ಹೇಳಿದರು. ವಿಜಯೋತ್ಸವ ಅಚರಿಸುವುದು ಬೇಡ, ರಾತ್ರಿಯೆಲ್ಲ ದುಡಿದಿರುವ ಪೋಲೀಸರು ದಣಿದಿದ್ದಾರೆ ಎಂದು ಸಂಬಂಧಪಟ್ಟ ಡಿಸಿಪಿಯೊಬ್ಬರು ಹೇಳಿದಾಗ, ಸರ್ಕಾರ ಹೇಳಿದಂತೆ ಕೇಳುವುದಷ್ಟೇ ನಿಮ್ಮ ಕೆಲಸ, ಸುಮ್ಮನೆ ಹೇಳಿದಷ್ಟು ಮಾಡಿ ಎಂದು ಸಿದ್ದರಾಮಯ್ಯ ಅಧಿಕಾರಿಯನ್ನು ಗದರಿದರಂತೆ ಎಂದು ಹೇಳಿದರು.

ಇದನ್ನೂ ಓದಿ:   ಜಾತಿಗಣತಿ ಮರು ಸಮೀಕ್ಷೆ: ಕನ್ನಡಿಗರ ಪ್ರಶ್ನೆಗಳನ್ನು ಸಿಎಂ ಸಿದ್ದರಾಮಯ್ಯ ಮುಂದಿಟ್ಟ ಆರ್​ ಅಶೋಕ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ