Karnataka Budget Session: ಸಿದ್ದರಾಮಯ್ಯ ನಡೆಸುತ್ತಿರೋದು ಯೂ-ಟರ್ನ್ ಸರ್ಕಾರ ಅಂತ ಜರಿದ ಬಿಜೆಪಿ ಶಾಸಕ ಸುನೀಲ ಕುಮಾರ
ಸುನೀಲ ಕುಮಾರ ಅವರು ಸಿದ್ದರಾಮಯ್ಯ ಚುನಾವಣೆ ವಿಷಯ ಮತ್ತು ಮುಡಾ ಸೈಟುಗಳನ್ನು ವಾಪಸ್ಸು ನೀಡಿದ ಬಗ್ಗೆ ಮಾತಾಡಿದಾಗ ಸಚಿವರಾದ ಭೈರತಿ ಸುರೇಶ್ ಮತ್ತು ಚಲುವರಾಯಸ್ವಾಮಿ ಕೆರಳುತ್ತಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ್ಯಾವ ಬಿಜೆಪಿ ನಾಯಕರು ಮುಡಾದಿಂದ ಅಕ್ರಮವಾಗಿ ಸೈಟು ಪಡೆದಿದ್ದಾರೆನ್ನುವುದು ಗೊತ್ತಾಗಲು ಸಿದ್ದರಾಮಯ್ಯ ಸೈಟುಗಳನ್ನು ವಾಪಸ್ಸು ನೀಡಿರುವರೆಂದು ಚಲುವರಾಯಸ್ವಾಮಿ ಹೇಳುತ್ತಾರೆ.
ಬೆಂಗಳೂರು, ಮಾರ್ಚ್ 5 : ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸುನೀಲ ಕುಮಾರ ಸರ್ಕಾರವನ್ನು ಯೂ-ಟರ್ನ್ ಸರ್ಕಾರ ಎಂದು ಹೇಳಿದರು. ಆದೇಶಗಳನ್ನು ಮಾಡಿದ ನಂತರ ಹಿಂಪಡೆಯುವುದು ಸರ್ಕಾರಕ್ಕೆ ಅಭ್ಯಾಸವಾಗಿ ಹೋಗಿದೆ. ಬಿಪಿಎಲ್ ಕಾರ್ಡ್ಗಳನ್ನು (BPL cards) ರದ್ದು ಮಾಡುವುದಾಗಿ ಆದೇಶ ಮಾಡುವ ಸರ್ಕಾರ ನಂತರ ಅದನ್ನು ವಾಪಸ್ಸು ಪಡೆದು ಸರ್ಕಾರಿ ನೌಕರರ ಕಾರ್ಡ್ ವಾಪಸ್ಸು ಪಡೆಯಲಾಗುವುದು ಎನ್ನುತ್ತದೆ, ವಕ್ಫ್ ವಿಷಯದಲ್ಲಿ ತನ್ನ ಆದೇಶ ಬದಲಿಸುತ್ತದೆ ಎಂದು ಸುನೀಲ ಕುಮಾರ ಹೇಳುತ್ತಾರೆ. ನಂತರ ಅವರು, ಖುದ್ದು ಸಿಎಂ ಅವರೇ, 2016-17ರಲ್ಲಿ ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಅಂತ ಹೇಳಿದವರು ಪುನಃ ಸ್ಪರ್ಧಿಸಿ ಮುಖ್ಯಮಂತ್ರಿಯೂ ಆಗುತ್ತಾರೆ ಎಂದು ಸುನೀಲ ಕುಮಾರ ಹೇಳುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೇರಳ ಸಿಎಂ ಪಿಣರಾಯಿ ವಿಜಯನ್ ಸನಾತನ ಹಿಂದೂ ಧರ್ಮದ ಶತ್ರು: ಬಿಜೆಪಿ ಶಾಸಕ ಸುನೀಲ್ ಕುಮಾರ್ ಕಿಡಿ