ಕಳೆದ 2 ವರ್ಷಗಳಲ್ಲಿ ಸಿದ್ದರಾಮಯ್ಯ 5 ವರ್ಷಗಳಿಗೆ ನಾನೇ ಸಿಎಂ ಅಂತ ಸಾವಿರ ಸಲ ಹೇಳಿದ್ದಾರೆ: ಅಶೋಕ

Updated on: Jul 02, 2025 | 6:19 PM

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯ ಪೂರ್ಣಾವಧಿಗೆ ನಾನೇ ಸಿಎಂ ಅಂತ ಕನಿಷ್ಠ ಸಾವಿರ ಸಲ ಹೇಳಿದ್ದಾರೆ, ಅದರ ಅವಶ್ಯಕತೆಯಿದೆಯಾ ಅನ್ನೋದು ಮುಖ್ಯ ಪ್ರಶ್ನೆ. ತಮ್ಮ ಅಧಿಕಾರಾವಧಿಗೆ ಕ್ರಮೇಣ ಗ್ರಹಣ ಹಿಡಿಯುತ್ತಿದೆ ಅನ್ನೋದು ಅವರಿಗೆ ಗೊತ್ತಾಗಿದೆ, ಆದರಿಂದ ಹೊರಬರುವ ವ್ಯರ್ಥ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಅಶೋಕ ಹೇಳಿದರು.

ಬೆಂಗಳೂರು, ಜುಲೈ 2: ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಕಾಂಗ್ರೆಸ್ ಶಾಸಕರೆಲ್ಲ ಅವಕಾಶ ಕೊಟ್ಟರೆ ನಾನೇ ಮುಖ್ಯಮಂತ್ರಿಯಾಗ್ತೀನಿ ಅನ್ನುತ್ತಾರೆ, ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್ ಸಿಎಂ ಹುದ್ದೆಗಾಗಿ ಜೋರಾಗಿ ಲಾಬಿ ನಡೆಸಿದ್ದಾರೆ, ಏತನ್ಮಧ್ಯೆ ಸಿದ್ದರಾಮಯ್ಯ (Siddaramaiah) 5-ವರ್ಷ ಅವಧಿಗೆ ನಾನೇ ಸಿಎಂ ಅನ್ನುತ್ತಾರೆ ಎಂದರು. ಕಾಂಗ್ರೆಸ್ ಮನೆಯೊದು ಬಾಗಿಲು ನೂರೊಂದು ರೀತಿ ಅಗಿದೆ, ಸಿದ್ದರಾಮಯ್ಯನವರಿಗೆ ತಮ್ಮ ಸ್ಥಾನದ ಬಗ್ಗೆ, ಅಳುಕಿದೆ, ಭಯವಿದೆ, ಹಾಗಾಗೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಬೇಕಿರುವುದನ್ನು ತಾವೇ ಹೇಳುತ್ತಾರೆ ಎಂದು ಅಶೋಕ ಹಾಸ್ಯವಾಡಿದರು.

ಇದನ್ನೂ ಓದಿ:  ಅಶೋಕಗೆ ತನ್ನ ಸ್ಥಾನದ ಬಗ್ಗೆ ಗ್ಯಾರಂಟಿ ಇಲ್ಲ, ಬೇರೆಯವರ ಸ್ಥಾನದ ಬಗ್ಗೆ ಮಾತಾಡುತ್ತಾರೆ: ಪ್ರದೀಪ್ ಈಶ್ವರ್, ಶಾಸಕ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ