ವರುಣಾದಿಂದ ಬಿವೈ ವಿಜಯೇಂದ್ರ ಸ್ಪರ್ಧಿಸಿದರೂ ಸಿದ್ದರಾಮಯ್ಯ 50,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ: ಸಂದೇಶ್ ನಾಗರಾಜ್
ವಿಜಯೇಂದ್ರ ರಾಜಕಾರಣದಲ್ಲಿ ನೆಲೆ ಕಂಡುಕೊಳ್ಳಬೇಕಾದರೆ ಶಿಕಾರಿಪುರದಿಂದ ಸ್ಪರ್ಧಿಸಬೇಕು ಅಂತ ಸಂದೇಶ್ ನಾಗರಾಜ್ ಹೇಳಿದರು.
ಮೈಸೂರು: ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತಿರುವ ಸಂದೇಶ್ ನಾಗರಾಜ್ (Sandesh Nagaraj) ಯಾಕೆ ಪಕ್ಷಾಂತರ ಮಾಡುತ್ತಿರೋದಿಕ್ಕೆ ಕಾರಣವೇನು ಅಂತಲೂ ಹೇಳಿದ್ದಾರೆ. ಮೈಸೂರಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ನಾಗರಾಜ್ ಅವರು, ಬಿಜೆಪಿ ನಾಯಕರು ಯೂಸ್ ಆಂಡ್ ಥ್ರೋ ನೀತಿ ಅನುಸರಿಸುತ್ತಾರೆ. ಬಿಎಸ್ ಯಡಿಯೂರಪ್ಪನವರ (BS Yediyurappa) ವಿಷಯದಲ್ಲೂ ಅದೇ ಆಯಿತು. ವರುಣಾ ಕ್ಷೇತ್ರದಲ್ಲಿ ಬಿವೈ ವಿಜಯೇಂದ್ರ ಸ್ಪರ್ಧಿಸಿ ಗೆಲ್ಲಿಸಲು, ಸಿದ್ದರಾಮಯ್ಯ (Siddaramaiah) ಅಲ್ಲಿ ಸೋಲುತ್ತಾರೆ ಅಂತ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಹೆದರುವ ವ್ಯಕ್ತಿಯಲ್ಲ, 50,000-60,000 ವೋಟುಗಳಿಂದ ನಿರಾಯಾಸವಾಗಿ ಗೆಲ್ಲುತ್ತಾರೆ ಎಂದು ಹೇಳಿದ ನಾಗರಾಜ್ ವಿಜಯೇಂದ್ರ ರಾಜಕಾರಣದಲ್ಲಿ ನೆಲೆ ಕಂಡುಕೊಳ್ಳಬೇಕಾದರೆ ಶಿಕಾರಿಪುರದಿಂದ ಸ್ಪರ್ಧಿಸಬೇಕು ಅಂತ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ