AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈಕಮಾಂಡ್ ಮಾತು ಯಾರು ಕೇಳಬೇಕು? : ಸಿಎಂ ಸಿದ್ದರಾಮಯ್ಯ, ಸುನಿಲ್ ಕುಮಾರ್ ನಡುವೆ ಜಟಾಪಟಿ

ಹೈಕಮಾಂಡ್ ಮಾತು ಯಾರು ಕೇಳಬೇಕು? : ಸಿಎಂ ಸಿದ್ದರಾಮಯ್ಯ, ಸುನಿಲ್ ಕುಮಾರ್ ನಡುವೆ ಜಟಾಪಟಿ

ಅಕ್ಷಯ್​ ಪಲ್ಲಮಜಲು​​
|

Updated on: Mar 25, 2026 | 7:29 PM

Share

ಬಜೆಟ್ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕ ಸುನಿಲ್ ಕುಮಾರ್ ಪ್ರಶ್ನೆಗೆ ತಿರುಗೇಟು ನೀಡಿದರು. ತಮ್ಮ ರಾಜಕೀಯ ಇತಿಹಾಸವನ್ನು ಸ್ಮರಿಸಿದ ಸಿದ್ದರಾಮಯ್ಯ, ಅಹಿಂದ ಸಮಾವೇಶದ ಕಾರಣದಿಂದ ದೇವೇಗೌಡರಿಂದ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದನ್ನು ವಿವರಿಸಿದರು. ಹೈಕಮಾಂಡ್ ವಿರುದ್ಧದ ಟೀಕೆಗೆ ಉತ್ತರಿಸಿ, ತಮ್ಮ ಪಕ್ಷ ನಿಷ್ಠೆಯನ್ನು ಪುನರುಚ್ಚರಿಸಿದರು.

ಬೆಂಗಳೂರು, ಮಾ.25: ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ತೀವ್ರ ಚರ್ಚೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರ ಪ್ರಶ್ನೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಹೈಕಮಾಂಡ್ ನಿರ್ಧಾರಗಳ ಕುರಿತು ಎದ್ದ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಪಕ್ಷ ನಿಷ್ಠೆ ಮತ್ತು ರಾಜಕೀಯ ತತ್ವಗಳನ್ನು ಹೆಚ್ಚು ಗೌರವಿಸುತ್ತೇನೆ. ನೀವು ಮೋದಿ ಅವರನ್ನು ಕೇಳಿ ಎಲ್ಲ ಮಾಡುತ್ತೀರಾ? ಎಂದು ಸಿಎಂ ಹೇಳದಾಗ, ಶಾಸಕ ಸುನಿಲ್ ಕುಮಾರ್ “ನಾನು ಮೋದಿಯವರ ಭಕ್ತ, ನಾನು ಹೈಕಮಾಂಡ್​ನ ಭಕ್ತ, ನಾನು ಒಬ್ಬ ಪಾರ್ಟಿಯ ಶಿಸ್ತಿನ ಸಿಪಾಯಿ. ನಾನು ಕರ್ನಾಟಕದಲ್ಲಿ ಇದ್ದೀನಿ ಅನ್ನೋ ಕಾರಣಕ್ಕೆ ಹೈಕಮಾಂಡ್ ಮಾತು ಕೇಳಲ್ಲ ಅಂತ ಹೇಳಲ್ಲ. ನಾನು ಹೈಕಮಾಂಡ್ ಮಾತೇ ಕೇಳೋದು, ನಾನು ಪಾರ್ಟಿ ಮಾತೇ ಕೇಳೋದು” ಎಂದು ಹೇಳಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಟೀಕೆಯನ್ನು ಮಾಡಿದ್ದಾರೆ. ಇನ್ನು ಸಿದ್ದರಾಮಯ್ಯ ಅವರು ತಮ್ಮ ಸುದೀರ್ಘ ರಾಜಕೀಯ ಪಯಣದ ಮಹತ್ವದ ಘಟನೆಗಳನ್ನು ಸದನದಲ್ಲಿ ವಿವರಿಸಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ನಾನು ರಾಜ್ಯ ಘಟಕದ ಅಧ್ಯಕ್ಷರಾಗಿದ್ದೆನೆಂದು ತಿಳಿಸಿದರು. “ಕರ್ನಾಟಕದಲ್ಲಿ ನಾವಿಬ್ಬರೂ ಪರಸ್ಪರ ಮಾತುಕತೆ ಆಡಿಕೊಂಡೇ ಪಕ್ಷ ನಡೆಸುತ್ತಾ ಇದ್ದಿದ್ದು” ಎಂದು ಸ್ಮರಿಸಿದರು. ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶವನ್ನು ಆಯೋಜಿಸುವ ನಿರ್ಧಾರವನ್ನು ದೇವೇಗೌಡರು ವಿರೋಧಿಸಿದರೂ, ಆದರೆ ನಾನು ಸಮಾವೇಶವನ್ನು ಯಶಸ್ವಿಯಾಗಿ ನಡೆಸಿದೆ. ಇದರ ಪರಿಣಾಮವಾಗಿ, ದೇವೇಗೌಡರು ಜನತಾ ದಳ (ಸೆಕ್ಯುಲರ್) ಪಕ್ಷದಿಂದ ನನ್ನನ್ನು ಉಚ್ಚಾಟಿಸಿದರು. 2006ರಲ್ಲಿ ಜನತಾ ದಳ (ಸೆಕ್ಯುಲರ್)ದಿಂದ ಉಚ್ಚಾಟನೆಗೊಂಡ ನಂತರ ಸಿದ್ದರಾಮಯ್ಯ ಅವರು ಅಖಿಲ ಭಾರತ ಪ್ರಗತಿಪರ ಜನತಾದಳ (APJD) ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದರು. “ನಾನು ರಘುಪತಿ ಅವರನ್ನು ಕಳಿಸಿ ಅದನ್ನ ರಿಜಿಸ್ಟರ್ ಮಾಡಿಸಿ ನಮ್ಮ ಹೆಸರಿಗೆ ಮಾಡಿಸಿಕೊಂಡಿದ್ದು” ಎಂದು ತಿಳಿಸಿದರು. ನಂತರ, ತಾವು ಒಂಬತ್ತು ಮಂದಿ ಶಾಸಕರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಮತ್ತೆ ಗೆಲುವು ಸಾಧಿಸಿ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡ ಬಗ್ಗೆ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us