‘ನಾನು ಮಾಡಿಕೊಂಡ ತಪ್ಪುಗಳಿಗೇ ನಾನೇ ಹೊಣೆ’: ನಟ ಯೋಗಿ ನೇರ ಮಾತು
ಕನ್ನಡ ಚಿತ್ರರಂಗದ ಖ್ಯಾತ ನಟ ಲೂಸ್ ಮಾದ ಯೋಗಿ ಅವರು 18 ವರ್ಷಗಳ ಜರ್ನಿಯಲ್ಲಿ ಏಳು-ಬೀಳುಗಳನ್ನು ನೋಡಿದ್ದಾರೆ. ಆ ಬಗ್ಗೆ ಅವರು ನೇರವಾಗಿ ಮಾತನಾಡಿದ್ದಾರೆ. ಈ ಅವರು ‘ಸಿದ್ಲಿಂಗು 2’ ಸಿನಿಮಾದಲ್ಲಿ ನಟಿಸಿದ್ದಾರೆ. ‘ಈಗ ಎಲ್ಲ ಸರಿಯಾಗಿ ಲೈನ್ಅಪ್ ಆಗಿದೆ. ಒಳ್ಳೆಯ ಸಿನಿಮಾಗಳು ಸಿಗುತ್ತಿವೆ’ ಎಂದು ಯೋಗಿ ಅವರು ಹೇಳಿದ್ದಾರೆ.
ನಟ ಯೋಗಿ ಅವರು ತಮ್ಮ ಸಿನಿಮಾ ಜರ್ನಿ ಬಗ್ಗೆ ಮಾತನಾಡಿದ್ದಾರೆ. ‘ನಾನು ಯಾರನ್ನೂ ದೂಷಿಸಲ್ಲ. ಅದು ನನ್ನ ವ್ಯಕ್ತಿತ್ವ ಅಲ್ಲ. ನಾನು ಮಾಡಿಕೊಂಡ ತಪ್ಪುಗಳಿಗೆ ನಾನೇ ಹೊಣೆ. ಇನ್ನೊಬ್ಬರ ಹೆಸರು ಹೇಳಲ್ಲ. ಅವರಿಂದ ಈ ರೀತಿ ಆಯ್ತು ಅಂತ ಹೇಳೋಕೆ ಆಗಲ್ಲ. ನಾನು ಸರಿಯಾಗಿ ಇದ್ದಿದ್ದರೆ ಎಲ್ಲರೂ ಸರಿಯಾಗಿ ಇರುತ್ತಿತ್ತು. ನನಗೆ ಸಪೋರ್ಟ್ ಬೇಕಿತ್ತು. ಹಾಗಾಗಿ ಕೆಲವು ಸಿನಿಮಾಗಳನ್ನು ಮಾಡಿದೆ. ನಾನು ಚಿತ್ರರಂಗಕ್ಕೆ ಬಂದು 18 ವರ್ಷ ಕಳೆಯಿತು. ‘ಸಿದ್ಲಿಂಗು 2’ ಸಿನಿಮಾ ನನಗೆ ತುಂಬ ಸ್ಪೆಷಲ್’ ಎಂದು ಯೋಗಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos